Sunday, August 16, 2026

BDA Apartments

Home Front Page ದಾವಣಗೆರೆಯ ಐವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಿ-  ಸಂಸದ ಜಿ.ಎಂ ಸಿದ್ಧೇಶ್ವರ್ ಆಗ್ರಹ…

ದಾವಣಗೆರೆಯ ಐವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಿ-  ಸಂಸದ ಜಿ.ಎಂ ಸಿದ್ಧೇಶ್ವರ್ ಆಗ್ರಹ…

ದಾವಣಗೆರೆ,ಡಿ,14,2019(www.justkannada.in):  ಉಪಚುನಾವಣೆಯಲ್ಲಿ ಬಿಜೆಪಿ 12 ಸ್ಥಾನ ಗೆದ್ದ ಹಿನ್ನೆಲೆ ಸಿಎಂ ಬಿಎಸ್ ವೈ ಸರ್ಕಾರ ಸುಭದ್ರವಾಗಿದ್ದು ಈ ಬೆನ್ನಲ್ಲೆ ಇದೀಗ ಸಚಿವ ಸ್ಥಾನಕ್ಕಾಗಿ ಹಲವು ಮಂದಿ ಲಾಬಿ ನಡೆಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದಿರುವ 11 ಮಂದಿಗೆ ಮಂತ್ರಿಗಿರಿ ಖಚಿತವಾಗಿದೆ.

ಈ ನಡುವೆ ಉಳಿದ ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ತೀವ್ರ ಪೈಪೋಟಿ ಉಂಟಾಗಲಿದೆ. ಈ ಮಧ್ಯೆ ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡುವಂತೆ ಜಿ.ಎಂ ಸಿದ್ಧೇಶ್ವರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಇಂದು ಮಾತನಾಡಿದ ಸಂಸದ ಜಿ.ಎಂ ಸಿದ್ಧೇಶ್ವರ್, ದಾವಣಗೆರೆ ಜಿಲ್ಲೆಯಲ್ಲಿ ಐವರು ಶಾಸಕರಿದ್ದಾರೆ. ಐವರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡಿ. ಬೈ ಎಲೆಕ್ಷನ್ ನಲ್ಲಿ ಗೆದ್ದಿರುವ 11 ಮಂದಿಗೆ ಸಚಿವ ಸ್ಥಾನ ನೀಡಲಿ. ಉಳಿದ ಎರಡು ಸ್ಥಾನಗಳ ಪೈಕಿ ದಾವಣಗೆರೆಗೆ ಒಂದು ಸ್ಥಾನ ನೀಡಲಿ ಎಂದು ಮನವಿ ಮಾಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಸಿಎಂ ಬಿಎಸ್ ವೈಗೆ ಕಷ್ಟವಿರೋದು ನಿಜ. ಸದ್ಯದ ಸ್ಥಿತಿ ಬಗ್ಗೆ ಬಿಎಸ್ ವೈಗೆ ಮನವರಿಕೆ ಮಾಡಿದ್ದೇನೆ. ದಾವಣಗೆರೆ ಜಿಲ್ಲೆಗೆ ಒಂದು ಸ್ಥಾನ ನೀಡಿದರೇ ಒಳ್ಳೆಯದು ಎಂದು ಜಿ.ಎಂ ಸಿದ್ಧೇಶ್ವರ್ ತಿಳಿಸಿದ್ದಾರೆ.

Key words:   Give – minister position – one – Davanagere- MP Siddheshwar