BMTC ಬಸ್ ಹರಿದು 9 ವರ್ಷದ ಬಾಲಕಿ ಸಾವು.

ಬೆಂಗಳೂರು,ಅಕ್ಟೋಬರ್,11,2025 (www.justkannada.in): ಬಿಎಂಟಿಸಿ ಬಸ್ ಗೆ ಮತ್ತೊಂದು ಬಲಿಯಾಗಿದ್ದು, ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ 9 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.

ಬೆಂಗಳೂರಿನ ರಾಜಾಜಿನಗರದ ಒಂದನೇ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ಭುವನ ಮೃತಪಟ್ಟ ವಿದ್ಯಾರ್ಥಿನಿ. ಭುವನ ಪಾಂಚಜನ್ಯ ವಿದ್ಯಾಪೀಠದಲ್ಲಿ ಓದುತ್ತಿದ್ದು ರಸ್ತೆ ಪಕ್ಕದಲ್ಲಿ ನಿಂತಿದ್ದಳು. ಈ ವೇಳೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು ಬಾಲಕಿ ಭುವನ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಈ ವೇಳೆ ಸ್ಥಳೀಯರು ತಕ್ಷಣ ಬದುಕಿಸುವ ಪ್ರಯತ್ನ ಮಾಡಿದರೂ ಕೂಡ ಯಾವುದೇ ಪ್ರಯತ್ನ ಸಫಲವಾಗಲಿಲ್ಲ. ವಿದ್ಯಾರ್ಥಿನಿ ಸಾವನಪ್ಪಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.

Key words: 9-year-old girl, dies , BMTC, bus, Collision