Sunday, August 23, 2026

BDA Apartments

Home Cinema ಅಕ್ಟೋಬರ್ 19ರಂದು ಮೈಸೂರಿನಲ್ಲಿ ‘ಘೋಸ್ಟ್’ ಅದ್ದೂರಿ ಮೆರವಣಿಗೆ !

ಅಕ್ಟೋಬರ್ 19ರಂದು ಮೈಸೂರಿನಲ್ಲಿ ‘ಘೋಸ್ಟ್’ ಅದ್ದೂರಿ ಮೆರವಣಿಗೆ !

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರ ಅಕ್ಟೋಬರ್ 19ರಂದು ಬಿಡುಗಡೆಯಾಗುತ್ತಿದೆ.

ಇದೇ ದಿನ ಮೈಸೂರಿನಲ್ಲಿ ‘ಘೋಸ್ಟ್’ ಅದ್ದೂರಿ ಮೆರವಣಿಗೆ ನಡೆಯಲಿದೆ.

ಡೋಲು, ನಗರಿ, ಕೇರಳದ ಚಂಡೆ, ತಮಟೆ ಮೊದಲಾದ ವಾದ್ಯಗಳು, ಜಾನಪದ ಕಲಾ ತಂಡಗಳು, ನೂರೈವತ್ತಕ್ಕೂ ಆಟೋಗಳಲ್ಲಿ ನಕ್ಷತ್ರಗಳು ಈ ಮೆರವಣಿಗೆಯ ಪ್ರಮುಖ ಆಕರ್ಷಣೆ. ಸಾವಿರಾರು ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

ಇಟ್ಟಿಗೆಗೂಡಿನಿಂದ ಆರಂಭವಾಗುವ ಮೆರವಣಿಗೆ ಡಿಸಿ ಕಛೇರಿ ಮೂಲಕ ಸಾಗಿ ವುಡ್ ಲ್ಯಾಂಡ್ಸ್ ಚಿತ್ರಮಂದಿರ ತಲುಪಲಿದೆ. ಶಿವರಾಜಕುಮಾರ್, ನಿರ್ಮಾಪಕ ಸಂದೇಶ್ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.