ಮೈಸೂರು,ಜುಲೈ,7,2025 (www.justkannada.in): ಶಾಸಕ ಜಿಟಿ ದೇವೇಗೌಡ ಜೆಡಿಎಸ್ ವಿರುದ್ದ ಅಸಮಾಧಾನಗೊಂಡು ಪಕ್ಷದಿಂದ ದೂರ ಉಳಿದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪುತ್ರ ಶಾಸಕ ಜಿ.ಡಿ ಹರೀಶ್ ಗೌಡ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಜಿ.ಡಿ ಹರೀಶ್ ಗೌಡ, ನಮ್ಮ ತಂದೆಗೆ ಪಕ್ಷದ ವಿಚಾರದಲ್ಲಿ ಬೇಸರ ಇರುವುದು ಸತ್ಯ. ಅವರು ಅಸಮಾಧಾನದಿಂದಲೇ ಜೆಡಿಎಸ್ ನಿಂದ ದೂರ ಉಳಿದಿದ್ದಾರೆ. ಜಿಟಿ ದೇವೇಗೌಡರನ್ನ ಮನವೊಲಿಸುವ ಪ್ರಯತ್ನ ಪಕ್ಷದ ವರಿಷ್ಠರು ಮಾಡುತ್ತಾರೆ ಇದು ನನ್ನ ಮನೆಯ ವೈಯಕ್ತಿಕ ವಿಚಾರ ಅಲ್ಲ. ಹೀಗಾಗಿ ಇದರ ಬಗ್ಗೆ ನಾನು ಹೆಚ್ಚು ಮಾತನಾಡಲು ಆಗಲ್ಲ. ನಾನು ಜೆಡಿಎಸ್ ನಲ್ಲಿ ಇದ್ದೇನೆ ಜೆಡಿಎಸ್ ನಲ್ಲೇ ಇರುತ್ತೇನೆ. ನಾನು ಕಾಂಗ್ರೆಸ್ ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಹುಣಸೂರು ಕ್ಷೇತ್ರದ ಜನರು ನನ್ನನ್ನ ಜೆಡಿಎಸ್ ನಿಂದ ಗೆಲ್ಲಿಸಿದ್ದಾರೆ. ಜನರ ನಮ್ಮನ್ನ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ನನ್ನ ಕ್ಷೇತ್ರದ ಜನರ ನಂಬಿಕೆಗೆ ನಾನು ದ್ರೋಹ ಮಾಡಲ್ಲ ಕುಮಾರಸ್ವಾಮಿ ಅವರನ್ನ ಮತ್ತೊಮ್ಮೆ ಸಿಎಂ ಮಾಡುವುದು ನಮ್ಮ ಉದ್ದೇಶ ಎಂದರು.
Key words: MLA, GT Deve Gowda, JDS, Son, GD Harish Gowda