Saturday, August 8, 2026

BDA Apartments

Home Front Page ‘ಕೈ’ಸರ್ಕಾರ ಇದ್ಧಾಗ ಬೆಲೆ ಏರಿಕೆ ಆಗಿರಲಿಲ್ವಾ? ನಿಜವಾದ ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ- ಸಚಿವ...

‘ಕೈ’ಸರ್ಕಾರ ಇದ್ಧಾಗ ಬೆಲೆ ಏರಿಕೆ ಆಗಿರಲಿಲ್ವಾ? ನಿಜವಾದ ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ- ಸಚಿವ ನಾರಾಯಣಗೌಡ.

ಬೆಂಗಳೂರು,ಸೆಪ್ಟಂಬರ್,3,2021(www.justkannada.in): ನಿಜವಾದ ಗ್ಯಾಸ್ ಬಳಕೆದಾರರು ಯಾರೂ ಬೀದಿಗೆ ಬಂದಿಲ್ಲ. ಬೀದಿಗೆ ಬಂದಿರುವವರು ರಾಜಕಾರಣಿಗಳು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ.

ಇಂಧನ ಬೆಲೆ, ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕುರಿತು ಮಾತನಾಡಿದ ಸಚಿವ ನಾರಾಯಣಗೌಡ, ಬೆಲೆ ಏರಿಕೆ ಆಗುತ್ತಿದೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಆದರೆ ಇಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಒಂದು ಡ್ರಾಮಾ ನಡೆಯುತ್ತಿದೆ. ಸಮಸ್ಯೆ ಯಾರಿಗೂ ಆಗಿಲ್ಲ, ಇದು ರಾಜಕಾರಣದ ಪಿತೂರಿ. ಕಾಂಗ್ರೆಸ್ ಸರ್ಕಾರ ಇರುವಾಗ ಬೆಲೆ ಏರಿಕೆ ಆಗಿರಲಿಲ್ವಾ? ಬೆಲೆಯಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ ಎಂದರು.

ಮನೆ ಮನೆಗೆ ಉಚಿತ ಗ್ಯಾಸ್ ಸೌಲಭ್ಯ ಕೊಟ್ಟಿದ್ದು ಯಾರು. ಹೆಣ್ಣುಮಕ್ಕಳಿಗೆ ತೊಂದರೆಯಾಗಬಾರದೆಂದು  ಗ್ಯಾಸ್ ಸೌಲಭ್ಯ ನೀಡಲಾಗಿದೆ.  ಬೆಲೆ ಏರಿಕೆ ತಾತ್ಕಾಲಿಕ. ಕಡಿಮೆಯಾಗುತ್ತದೆ. ಬೆಲೆ ಏರಿಕೆ ಸಮಸ್ಯೆ ನಿವಾರಿಸಲು ಪ್ರಧಾನಿ ಮೋದಿ ಸನ್ನದ್ಧರಾಗಿದ್ದಾರೆ ಎಂದು ಸಚಿವ ನಾರಾಯಣಗೌಡ ತಿಳಿಸಿದರು.

Key words: gas users –not-streets -Minister -Narayana Gowda