Sunday, August 2, 2026

BDA Apartments

Home Crime  ಮೈಸೂರಿಗೆ ಬಂದ ಕೇರಳದ ತ್ಯಾಜ್ಯ: ಚಾಲಕ ಮತ್ತು ಲಾರಿಯನ್ನ ವಶಕ್ಕೆ ಪಡೆದ ಪಾಲಿಕೆ ಅಧಿಕಾರಿಗಳು..

 ಮೈಸೂರಿಗೆ ಬಂದ ಕೇರಳದ ತ್ಯಾಜ್ಯ: ಚಾಲಕ ಮತ್ತು ಲಾರಿಯನ್ನ ವಶಕ್ಕೆ ಪಡೆದ ಪಾಲಿಕೆ ಅಧಿಕಾರಿಗಳು..

ಮೈಸೂರು,ಜು,19,2019(www.justkannada.in): ತಡರಾತ್ರಿ ಕೇರಳಾದಿಂದ ತ್ಯಾಜ್ಯ ತುಂಬಿಕೊಂಡು ಮೈಸೂರಿಗೆ ಬರುತ್ತಿದ್ದ ಲಾರಿ ಮತ್ತು ಲಾರಿ ಚಾಲಕನನ್ನ ಮೈಸೂರು ನಗರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಚಾಲಕ ಜಾಫರ್ ಹಾಗೂ ಲಾರಿಯನ್ನ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಡರಾತ್ರಿ ಕೇರಳಾದಿಂದ ತ್ಯಾಜ್ಯ ತುಂಬಿಕೊಂಡು ಮೈಸೂರಿಗೆ ಲಾರಿ ಬರುತ್ತಿತ್ತು. ಈ ನಡುವೆ ಟೋಲ್ ಗೇಟ್ ಬಳಿ ತೆರಿಗೆ ಅಧಿಕಾರಿಗಳ ತಪಾಸಣೆ ವೇಳೆ  ವ್ಯಕ್ತಿ  ಸಿಕ್ಕಿಬಿದ್ದಿದ್ದಾನೆ. ಶಾಂತಿ ನಗರದ ಟ್ರೇಡರ್ಸ್ ನ  ಮಾಲೀಕ ಹಕೀಬ್ ಎಂಬ ವ್ಯಕ್ತಿ ಹೆಸರಲ್ಲಿ ಬಿಲ್ ಮಾಡಲಾಗಿತ್ತು.

ಇನ್ನು ಈ ಬಗ್ಗೆ ಕೂಡಲೆ ಮೇಯರ್ ಪುಷ್ಪಲತಾ ಜಗನ್ನಾಥ್ ಗೆ ಅವರಿಗೆ ಅಧಿಕಾರಿಗಳು ಕರೆ ಮಾಡಿ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಆಗಮಿಸಿದ ಮೇಯರ್  ಪುಷ್ಪಲತಾ ಜಗನ್ನಾಥ್ ಮತ್ತು ಉಪಮೇಯರ್, ಲಾರಿಯಲ್ಲಿ ಇದ್ದ ತ್ಯಾಜ್ಯವನ್ನು ಪರಿಶೀಲನೆ ನಡೆಸಿ ಇದರ ಬಗ್ಗೆ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ  ಸೂಚನೆ ನೀಡಿದರು.

ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Key words: Garbage-Kerala – Mysore-driver -custody