JK EXCLUSIVE: ಮೈಸೂರಲ್ಲಿ ಪತ್ತೆಯಾದ  333 ಕೇಜಿ ಗಾಂಜದ ಮೂಲ ಬಾಂಬೆ : JD ಕೊರಿಯರ್‌ ಮೂಲಕ ರವಾನೆ..!

The fact that the source of the cannabis (MDMA) worth crores of rupees found in Mysore, which recently attracted the attention of the country, is Maharashtra has now been revealed. This cannabis discovery, which attracted the attention of not only Karnataka but the entire country last week, had echoed in Parliament. Mysore-Kodagu MP Yaduveer had raised the issue and questioned the police failure. According to the information that has now been revealed, the source of the cannabis network is Mumbai, the capital of Maharashtra.

vtu

ಮೈಸೂರು, ಆ.೦೮,೨೦೨೫: (www.justkannada.in news) ಇತ್ತೀಚಿಗೆ ದೇಶದ ಗಮನ ಸೆಳೆದಿದ್ದ ಮೈಸೂರಲ್ಲಿ ಪತ್ತೆಯಾಗಿದ್ದ ಕೋಟ್ಯಾಂತರ ರೂ.ಮೌಲ್ಯದ ಗಾಂಜ (MDMA) ಮೂಲ ಮಹಾರಾಷ್ಟ್ರ ಎಂಬ ಅಂಶ ಇದೀಗ ಬಹಿರಂಗಗೊಂಡಿದೆ.

ಕಳೆದ ವಾರ ಕರ್ನಾಟಕ ಮಾತ್ರವಲ್ಲ ಇಡೀ ದೇಶದ ಗಮನ ಸೆಳೆದಿದ್ದ ಈ ಗಾಂಜ ಪತ್ತೆ, ಸಂಸತ್ತಿನಲ್ಲಿ ಪ್ರತಿಧ್ವನಿಸಿತ್ತು. ಮೈಸೂರು-ಕೊಡಗು ಸಂಸದ ಯದುವೀರ್‌ ವಿಷಯ ಪ್ರಸ್ತಾಪಿಸಿ ಪೊಲೀಸ್‌ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದರು. ಇದೀಗ ಬಹಿರಂಗಗೊಂಡಿರುವ ಮಾಹಿತಿ ಪ್ರಕಾರ, ಗಾಂಜ ಜಾಲದ ಮೂಲ ಮಹಾರಾಷ್ಟ್ರದ ರಾಜಧಾನಿ ಮುಂಬೈ.

ಕೊರಿಯರ್‌ ಮೂಲಕ ಗಾಂಜ ಚೀಲಗಳು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ರವಾನೆಯಾಗಿದೆ. “ಜಸ್ಟ್‌ ಕನ್ನಡ” ಗೆ ಲಭಿಸಿದ ಮಾಹಿತಿ ಪ್ರಕಾರ, ಜುಲೈ 04 ರಂದು ಕೇಂದ್ರ ಬಾಂಬೆಯ ಪ್ರದೇಶವೊಂದರಿಂದ ಬೆಂಗಳೂರಿಗೆ ಎಂಡಿಎಂಎ‌ “JD-ಕೊರಿಯರ್ ” ಮೂಲಕ ರವಾನೆ. ಈ ಕೊರಿಯರ್‌ ಬೆಂಗಳೂರಿಂದ ಜು. 07  ರಂದು ಮೈಸೂರಿಗೆ ತಲುಪಿದೆ.

333 ಕೇಜಿ ತೂಕದ ಗಾಂಜ ತುಂಬಿದ ಒಟ್ಟು 16 ರಿಂದ 17 ಬ್ಯಾಗುಗಳಲ್ಲಿ ಗಾಂಜ “JD-ಕೊರಿಯರ್‌ ” ಮೂಲಕ ಮುಂಬೈನಿಂದ ಕರ್ನಾಟಕಕ್ಕೆ ರವಾನೆಯಾಗಿದೆ.

ಈ ಘಟನೆ ಪತ್ತೆಯಾದ ಬೆನ್ನಲ್ಲೇ  ಮೈಸೂರಿನ ವರ್ಚಸ್ಸಿಗೆ ಕಪ್ಪುಮಸಿ ಬಳಿದಂತಾಗಿತ್ತು. ಪ್ರಮುಖವಾಗಿ ಪೊಲೀಸ್‌ ಇಲಾಖೆ ತಲೆತಗ್ಗಿಸುವಂತಾಗಿತ್ತು.  ಆದರೆ ಇದೀಗ ಗಾಂಜ ಪತ್ತೆ ಪ್ರಕರಣದ ಬೆನ್ನತಿದ ಕರ್ನಾಟಕ ಪೊಲೀಸರು, ಅದರ ಮೂಲವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರಲ್ಲಿ ಪತ್ತೆ:

ಮೈಸೂರು ಮತ್ತು ಮುಂಬೈ ಪೊಲೀಸರು ಕಳೆದ ವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನರಸಿಂಹರಾಜ ಪೊಲೀಸ್  ಠಾಣೆ ವ್ಯಾಪ್ತಿಯ ಹೊರ ವರ್ತುಲ ಪ್ರದೇಶದದಲ್ಲಿನ  ವಾಹನ ಗ್ಯಾರೆಜ್‌ನಲ್ಲಿ ಈ ಗಾಂಜ ಸಂಗ್ರಹ ಪತ್ತೆಯಾಗಿತ್ತು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.  ಈ ಪೈಕಿ ಇಬ್ಬರು ಆರೋಪಿಗಳು ಮುಂಬೈ ಮೂಲದವರಾದರೆ, ಮತ್ತಿಬ್ಬರು ಮೈಸೂರು ಮೂಲದವರು ಎಂಬುದನ್ನು ಸ್ಮರಿಸಬಹುದು.

key words: 333 kg of ganja, MDMA seized, Mysore, Bombay, Dispatch, JD courier, Police, investigation

vtu

SUMMARY:

333 kg of ganja seized in Mysore original Bombay: Dispatch through JD courier

The fact that the source of the cannabis (MDMA) worth crores of rupees found in Mysore, which recently attracted the attention of the country, is Maharashtra has now been revealed.

This cannabis discovery, which attracted the attention of not only Karnataka but the entire country last week, had echoed in Parliament. Mysore-Kodagu MP Yaduveer had raised the issue and questioned the police failure. According to the information that has now been revealed, the source of the cannabis network is Mumbai, the capital of Maharashtra.

The bags of ganja were sent from Maharashtra to Karnataka through courier. According to information received by “Just Kannada”, on July 04, MDMA was sent from an area in central Bombay to Bangalore through “JD-Courier”. This courier reached Mysore from Bangalore on July 07.