ವಿಶ್ವಕಪ್‍ನ ವೀಕ್ಷಣೆ ವಿವರಣೆಗಾರರಾಗಿ ಗಂಗೂಲಿ, ಹರ್ಷಬೋಂಗ್ಲೆ, ಸಂಜಯ್‍ಮಂಜ್ರೇಕರ್ ಆಯ್ಕೆ

0
269

ಲಂಡನ್, ಮೇ, 18, 2019 (www.justkannada.in): ವಿಶ್ವಕಪ್‍ ವೀಕ್ಷಣೆ ವಿವರಣೆಗಾರರಾಗಿ ಭಾರತ ತಂಡದ ಮಾಜಿ ನಾಯಕ ಸೌರವ್‍ಗಂಗೂಲಿ, ಹರ್ಷಬೋಂಗ್ಲೆ ಮತ್ತು ಸಂಜಯ್‍ಮಂಜ್ರೇಕರ್ ಅವರಿಗೆ ಐಸಿಸಿ ಅವಕಾಶ ಕಲ್ಪಿಸಿದೆ.

ಮೇ 30 ರಿಂದ ಆರಂಭಗೊಳ್ಳಲಿರುವ 12ನೇ ವಿಶ್ವಕಪ್‍ಗಾಗಿ 24 ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ ಹೊರಡಿಸಿದ್ದು, ಇದರಲ್ಲಿ ಭಾರತದ ಮೂವರಲ್ಲದೆ ಶ್ರೀಲಂಕಾದ ಕುಮಾರಸಾಂಗಾಕ್ಕಾರ, ಪಾಕಿಸ್ತಾನದ ವಾಸಿಂ ಅಕ್ರಮ್, ರಮೀಜ್‍ರಾಜಾ, ಬಾಂಗ್ಲಾದೇಶದ ಅತ್ತರ್ ಅಲಿ ಖಾನ್‍ಗೆ ಅವಕಾಶ ನೀಡಲಾಗಿದೆ.

ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 23 ಮಂದಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ ಗುರುವಾರ ಪ್ರಕಟಿಸಿದೆ. ಇದರಲ್ಲಿ ಇಂಗ್ಲೆಂಡಿನ 4, ಭಾರತ ಮತ್ತು ನ್ಯೂಜಿಲೆಂಡಿನ 3, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ಪಾಕಿಸ್ತಾನ ಪರ ಇಬ್ಬರು ಹಾಗೂ ಬಾಂಗ್ಲಾದೇಶ, ಶ್ರೀಲಂಕಾ, ಜಿಂಬಾಬ್ವೆಯಿಂದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ.