ಪುತ್ತೂರಿನಲ್ಲಿ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ; ಆರೋಪಿತ ಐವರು ವಿದ್ಯಾರ್ಥಿಗಳ ಬಂಧನ…

ದಕ್ಷಿಣ ಕನ್ನಡ,ಜು,3,2019(www.justkannada.in) ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಐವರು ವಿದ್ಯಾರ್ಥಿಗಳನ್ನ ಪೊಲೀಸರ ವಿಶೇಷ ತನಿಖಾ ತಂಡ ಬಂಧಿಸಿದೆ.

ಪುತ್ತೂರು ತಾಲ್ಲೂಕಿನ ಬಜತ್ತೂರು ಗ್ರಾಮದ ಗಾಣದಮನೆ ನಿವಾಸಿ ಗುರುನಂದನ್ (19), ಬಂಟ್ವಾಳ ತಾಲ್ಲೂಕಿನ ಪೆರ್ನೆ ನಿವಾಸಿಗಳಾದ ಪ್ರಜ್ವಲ್ (19) ಮತ್ತು ಕಿಶನ್ (19), ಪುತ್ತೂರು ತಾಲ್ಲೂಕಿನ ಆರ್ಯಾಪು ಗ್ರಾಮದ ಪಿಲಿಗುಂಡ ನಿವಾಸಿ ಸುನೀಲ್ (19) ಹಾಗೂ ಬಂಟ್ವಾಳ ತಾಲ್ಲೂಕಿನ ಬರಿಮಾರು ಗ್ರಾಮದ ಬಲ್ಯ ನಿವಾಸಿ ಪ್ರಖ್ಯಾತ್ (19)ಬಂಧಿತ ವಿದ್ಯಾರ್ಥಿಗಳು.

ಸಂತ್ರಸ್ತ ವಿದ್ಯಾರ್ಥಿಯನ್ನ ಔಟಿಂಗ್ ಗೆ ಎಂದು ಕರೆದೊಯ್ದಿದ್ದರು.  ಈ ವೇಳೆ ವಿದ್ಯಾರ್ಥಿನಿಗೆ ಗಾಂಜಾ ನೀಡಿ ಪ್ರಜ್ಞಾಹೀನ ಸ್ಥತಿಯಲ್ಲಿದ್ದ ವಿದ್ಯಾರ್ಥಿನಿ ಮೇಲೆ ಐವರು ವಿದ್ಯಾರ್ಥಿಗಳು ಸಾಮೂಹಿಕ ಅತ್ಯಾಚಾರವೆಸಗಿದ್ದರು.

ಇದಾದ ಬಳಿಕ ಸಾಮೂಹಿಕ ಅತ್ಯಾಚಾರದ ದೃಶ್ಯವನ್ನ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಈ ಸಂಬಂಧ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಸಂಬಂಧ ಇದೀಗ ವಿಶೇಷ ತನಿಖಾ ತಂಡ ಆರೋಪಿತ ಐವರು ವಿದ್ಯಾರ್ಥಿಗಳನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಇನ್ನು ಐವರು ವಿದ್ಯಾರ್ಥಿಗಳನ್ನ ಕಾಲೇಜಿನಿಂದ ಅಮಾನತು ಮಾಡಿ ಖಾಸಗಿ ಕಾಲೇಜು ಆಡಳಿತ ಮಂಡಳಿ ಸಭೆಯಲ್ಲಿ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

Key words: Gang rape-case –Puttur- Arrest -five – students.