Friday, August 28, 2026

BDA Apartments

Home Cinema ‘ತ್ರಿಬಲ್ ರೈಡಿಂಗ್’ ಮಾಡಲು ಗೋಲ್ಡನ್ ಸ್ಟಾರ್ ರೆಡಿ !

‘ತ್ರಿಬಲ್ ರೈಡಿಂಗ್’ ಮಾಡಲು ಗೋಲ್ಡನ್ ಸ್ಟಾರ್ ರೆಡಿ !

ಬೆಂಗಳೂರು, ಸೆಪ್ಟೆಂಬರ್ 24, 2020 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಿನಿಮಾ ಶೂಟಿಂಗ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

ಶೂಟಿಂಗ್ ಗೂ ಮೊದಲು ಚಿತ್ರತಂಡ ಸಂಗೀತ ಸಂಯೋಜನೆ ಕೆಲಸ ಮುಗಿಸುತ್ತಿದೆ. ಹೈದರಾಬಾದ್ ನಲ್ಲಿ ಚಿತ್ರದ ಸಂಗೀತ ಸಂಯೋಜನೆ ಕೆಲಸಗಳು ನಡೆಯುತ್ತಿದೆ.

ಸಂಗೀತ ನಿರ್ದೇಶಕ ಸಾಯ್ ಕಾರ್ತಿಕ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಇದಕ್ಕಾಗಿ ನಟ ಗಣೇಶ್ ಮತ್ತು ಚಿತ್ರತಂಡ ಹೈದರಾಬಾದ್ ನಲ್ಲಿದೆ. ಲಾಕ್ ಡೌನ್ ಬಳಿಕ ಗಣೇಶ್ ಶೂಟಿಂಗ್ ಆರಂಭಿಸಲಿರುವ ಮೊದಲ ಸಿನಿಮಾ ಇದಾಗಿದೆ.