ಡ್ರಗ್ ಮಾಫಿಯಾ: ವಿಚಾರಣೆಗಾಗಿ ದೀಪಿಕಾ, ರಕುಲ್, ಶ್ರದ್ಧಾಗೆ ಎನ್’ಸಿಬಿ ಬುಲಾವ್

0
148

ಮುಂಬೈ, ಸೆಪ್ಟೆಂಬರ್ 24, 2020 (www.justkannada.in):
ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತ್ ಸಿಂಗ್‌ಗೆ ಎನ್ ಸಿಬಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ನ್ನು ಜಾರಿ ಮಾಡಿದೆ.

ಬಾಲಿವುಡ್ ಡ್ರಗ್ಸ್ ಮಾಫಿಯಾ ವಿಚಾರಣೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯ ಮೊಬೈಲ್ ಫೋನ್‍ನಿಂದ ಮರುಪಡೆಯಲಾದ ವಾಟ್ಸಾಪ್ ಸಂದೇಶಗಳ ಆಧಾರದ ಮಾದಕಗಳ ನಿಯಂತ್ರಣ ಬ್ಯೂರೋ ವಿಚಾರಣೆ ನಡೆಸುತ್ತಿದೆ.

ಇಂದು ನಟಿ ರಕುಲ್ ಪ್ರೀತ್ ಸಿಂಗ್, ನಾಳೆ ದೀಪಿಕಾ ಪಡುಕೋಣೆ, ಶನಿವಾರ ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.