ಗಂಧದಗುಡಿ ರಿಲೀಸ್ ಹಿನ್ನೆಲೆ: ರಾಜ್ಯಾದ್ಯಂತ ಅಪ್ಪು ಅಭಿಮಾನಿಗಳಿಂದ ಸಂಭ್ರಮಾಚರಣೆ.

ಬೆಂಗಳೂರು,ಅಕ್ಟೋಬರ್,28,2022(www.justkannada.in):  ಇಂದು ನಟ ದಿ.ಪುನೀತ್ ರಾಜ್ ಕುಮಾರ್ ಅವರ ಕನಸಿನ ಗಂಧದಗುಡಿ ಬಿಡುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹಲವು ಜಿಲ್ಲೆಗಳಿಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಮನೆ ಮಾಡಿದೆ.

ಗಂಧದಗುಡಿ ಬಿಡುಗಡೆಯಾಗುತ್ತಿದ್ದಂತೆ ಅಪ್ಪು ಅಭಿಮಾನಿಗಳು ಥಿಯೇಟರ್ ನತ್ತ ಧಾವಿಸಿ ಚಿತ್ರ ವೀಕ್ಷಿಸುತ್ತಿದ್ದು, ಬೆಂಗಳೂರು, ಬೀದರ್, ಬಳ್ಳಾರಿ, ಹಾಸನ ರಾಮನಗರ ಹಾಗೂ ಕೋಲಾರ, ಹುಬ್ಬಳ್ಳಿ ಮಂಡ್ಯ, ಚಿಕ್ಕಬಳ್ಳಾಪುರ ಸೇರಿ ರಾಜ್ಯಾದ್ಯಂತ ನಟ ಪುನೀತ್ ಅವರ ಅಭಿಮಾನಿಗಳ ಸಂಭ್ರಮಾಚರಣೆ ಜೋರಾಗಿದೆ.

ಥೀಯೇಟರ್ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಕುಣಿದು ಸಂಭ್ರಮಿಸುತ್ತಿದ್ದರೇ  ಹಲವು ಅಭಿಮಾನಿಗಳು ತೆರೆಯ ಮೇಲೆ ಅಪ್ಪು ಕಣ್ತುಂಬಿಕೊಂಡು ಕಣ್ಣೀರಾಕ್ಕಿದ್ದಾರೆ. ಇನ್ನು ಬೆಂಗಳೂರಿನ ಪ್ರಸನ್ನ ಥಿಯೇಟರ್ ಬಳಿ ಅಭಿಮಾನಿಗಳು ರಕ್ತದಾನ ಶಿಬಿರ ಆಯೋಜಿಸಿದ್ದಾರೆ.

Key words: Gandhadagudi -Release -Celebrations – Appu- fans – state.