ಮಾಜಿ ಸಿಎಂ ಸಿದ್ಧರಾಮಯ್ಯಗೆ ಕೋಲಾರದಿಂದ ಸ್ಪರ್ಧಿಸುವಂತೆ ಒತ್ತಾಯ…

ಮೈಸೂರು,ಅಕ್ಟೋಬರ್,28,2022(www.justkannada.in):  ಮುಂದಿನ ವಿಧಾನಸಭಾ ಚುನಾವಣೆಗೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವಂತೆ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ಬೆಂಬಲಿಗರು ಒತ್ತಾಯ ಮಾಡಿದ್ದಾರೆ.

ಕೋಲಾರದಿಂದ ಕಾರ್ಯಕರ್ತರು ಮೈಸೂರಿಗೆ ಆಗಮಿಸಿ ಸಿದ್ಧರಾಮಯ್ಯ ಅವರನ್ನ ಭೇಟಿ ಮಾಡಿ ಒತ್ತಾಯ ಮಾಡಿದ್ದಾರೆ.  ಮೈಸೂರಿನ ಆಂದೋಲನ ವೃತ್ತದ ಬಳಿ ಪಾರ್ಕ್ ನಲ್ಲಿ ಸಿದ್ಧರಾಮಯ್ಯ ವಾಕಿಂಗ್ ಮಾಡುವ ವೇಳೆ ಕೋಲಾರದಿಂದ ಬಂದಿದ್ಧ 30ಕ್ಕೂ ಹೆಚ್ಚು ಕಾರ್ಯಕರ್ತರು ಭೇಟಿ ಮಾಡಿದರು.

ಈ ವೇಳೆ  ಬೆಂಬಲಿಗರು ಮುಂದಿನ ಚುನಾವಣೆಗೆ ಕೋಲಾರದಿಂದ ಸ್ಪರ್ಧಿಸುವಂತೆ ಸಿದ್ಧರಾಮಯ್ಯಗೆ ಒತ್ತಾಯ ಮಾಡಿದರು. ಈ ವೇಳೆ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ಒಂದು ದಿನ ಅಲ್ಲಿಗೆ ಬಂದು ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

Key words: Former CM-Siddaramaiah- urged – contest – Kolar