ಮೈಸೂರು,ಸೆಪ್ಟಂಬರ್,15,2025 (www.justkannada.in): ಮೈಸೂರು ಮಹಾನಗರ ಪಾಲಿಕೆಗೆ ಸೇರಿರುವ ಮೈಸೂರು ನಗರ, ಕೆ.ಆರ್. ಮೊಹಲ್ಲಾ, ಮದ್ವಾಚಾರ್ ರಸ್ತೆ, ಗಾಡಿಚೌಕದಲ್ಲಿರುವ ಸಾರ್ವಜನಿಕ ಉಪಯೋಗಿ ಜಾಗವನ್ನು ಅಕ್ರಮಿಸಿಕೊಂಡು ಕಾನೂನುಬಾಹಿರವಾಗಿ ಬಾಡಿಗೆ ನೀಡಿರುವ ಹಾಗೂ ಹಪ್ತ ವಸೂಲು ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾಗ ಅಕ್ರಮಿಸಿರುವುದನ್ನ ತೆರವುಗೊಳಿಸುವಂತೆ ಮನವಿ ಮಾಡಿ ವಕೀಲ ಅ.ಮ.ಭಾಸ್ಕರ್ ಅವರು ಕೆಆರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ದೂರು ಸಲ್ಲಿಸಿರುವ ವಕೀಲ ಅ.ಮ ಭಾಸ್ಕರ್, ಮೈಸೂರು ನಗರ, ಕೆ.ಆರ್. ಮೊಹಲ್ಲಾ, ಮದ್ವಾಚಾರ್ ರಸ್ತೆ, ಗಾಡಿಚೌಕ ಸ್ವತ್ತಿನ ಸಂಖ್ಯೆ: 2192, ಕೆ-65 ರ ಸ್ವತ್ತು ಸಾರ್ವಜನಿಕ ಉಪಯೋಗಿ ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಸ್ವತ್ತಾಗಿದೆ. ಸದರಿ ಸ್ವತ್ತಿನಲ್ಲಿ ಕೆಲವು ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಸದರಿ ಸ್ವತ್ತಿನಲ್ಲಿ ಪ್ರತಿನಿತ್ಯವೂ ಅಕ್ರಮವಾಗಿ ಆಟೋಗಳು, ಗೂಡ್ಸ್ ಗಾಡಿಗಳು, ತಳ್ಳುವ ಗಾಡಿಗಳು, ದೊಡ್ಡ ಜನರೇಟರ್ ಗಳನ್ನು ಇಡಲು ಕಾನೂನುಬಾಹಿರವಾಗಿ ಅನುಮತಿ ನೀಡಿ, ಕೆಲವರು ಪ್ರತಿನಿತ್ಯ ಬಾಡಿಗೆ ವಸೂಲು ಮಾಡುತ್ತಿದ್ದಾರೆ. ಅದಲ್ಲದೇ ಸದರಿ ಸ್ಥಳದಲ್ಲಿ ಕಾನೂನುಬಾಹಿರವಾಗಿ ಸೌದೆ ಡಿಪೋ, ಟಿಂಕರಿಂಗ್ ಕೆಲಸ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಸ್ಥಳವನ್ನು ನೀಡಿ ಸದರಿಯವರು ಗಳಿಂದ ಮಾಸಿಕವಾಗಿ ಬಾಡಿಗೆಯನ್ನೂ ಸಹ ಸಂಗ್ರಹಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ಸದರಿ ಈ ಕೆಲಸಗಳನ್ನು ಕೆಲವು ಗೂಂಡಾಗಳು ನಿರ್ವಹಿಸುತ್ತಿದ್ದಾರೆ.
ಸದರಿ ಸ್ವತ್ತು ಮೈಸೂರು ಮಹಾನಗರ ಪಾಲಿಕೆಗೆ ಸೇರಿದ ಸ್ವತ್ತಾಗಿದ್ದು, ಸುತ್ತಮುತ್ತಲ ಬಡಾವಣೆ ನಿವಾಸಿಗಳಿಗೆ ವಾಯುವಿಹಾರ, ಕ್ರೀಡಾ ಚಟುವಟಿಕೆಗಳಿಗೆ ಮೀಸಲಿಟ್ಟ ಜಾಗವಾಗಿದೆ. ಆದುದರಿಂದ ತಾವು ಈ ಕೂಡಲೇ ಸದರಿ ಮೇಲ್ಕಂಡ ಸ್ವತ್ತನ್ನು ಆಕ್ರಮಿಸಿಕೊಂಡು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಜಾಗವನ್ನು ಆಕ್ರಮಿಸಿಕೊಂಡಿರುವವರನ್ನು ತೆರವುಗೊಳಿಸಿ ಮೊಹಲ್ಲಾದ ನಿವಾಸಿಗಳಿಗೆ ವಾಯು ವಿಹಾರ ಮಾಡಲು ಹಾಗೂ ಶಾಲಾ ಮಕ್ಕಳಿಗೆ ಕ್ರೀಡಾ ಚಟುವಟಿಕೆ ನಡೆಸಲು ಅನುವು ಮಾಡಿಕೊಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
Key words: Gadichhowka, dispute, Lawyer, A.M. Bhaskar, complains