ಮೈಸೂರಿನಲ್ಲಿ ಇಂದಿನಿಂದ ಜಿ20 ಶೃಂಗಸಭೆ ಸಭೆ : ಬಿಗಿ ಪೊಲೀಸ್ ಭದ್ರತೆ.

ಮೈಸೂರು,ಜುಲೈ,31,2023(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದಿನಿಂದ  ಜಿ20 ಶೃಂಗಸಭೆಯ ಪೂರ್ವಭಾವಿ ಸಭೆ ನಡೆಯಲಿದೆ.

ಇಂದಿನಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಿ20ಯ 250 ಸದಸ್ಯರು ಈಗಾಗಲೇ ಮೈಸೂರಿಗೆ ಬಂದಿಳಿದಿದ್ದು ರ್ಯಾಡಿಷನ್ ಬ್ಲೂ,ಗ್ರ್ಯಾಂಡ್ ಮರ್ಕ್ಯೂರಿ ಹೊಟೆಲ್‌ಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಜಿ20ಯ ಸದಸ್ಯರು ಮೈಸೂರು ಅರಮನೆ, ಕೆಆರ್‌ಎಸ್, ಸೋಮನಾಥಪುರ ದೇವಾಲಯಕ್ಕೆ ಭೇಟಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ಸದಸ್ಯರಿಗೆ ಪೊಲೀಸರಿಂದ‌ ಬಿಗಿ ಭದ್ರತೆ ವಹಿಸಲಾಗಿದೆ. ಇನ್ನು ಈ ಶೃಂಗಸಭೆಯಲ್ಲಿ ಪಾರಂಪರಿಕತೆ ಬಗ್ಗೆ ಸಮಾಲೋಚನೆ ನಡೆಯಲಿದೆ.

Key words: G20 summit- meeting – Mysore – today.