Sunday, September 20, 2026

BDA Apartments

Home Front Page ಕೆಎಸ್ ​ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿ- ಕೆಎಸ್​ಡಿಎಲ್​​ ನೌಕರರ ಸಂಘದ ಶಿವಶಂಕರ್ ಆರೋಪ.

ಕೆಎಸ್ ​ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿ- ಕೆಎಸ್​ಡಿಎಲ್​​ ನೌಕರರ ಸಂಘದ ಶಿವಶಂಕರ್ ಆರೋಪ.

ಬೆಂಗಳೂರು,ಮಾರ್ಚ್,4,2023(www.justkannada.in): ಕೆಎಸ್​ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಕೆಎಸ್​ಡಿಎಲ್​​ ನೌಕರರ ಸಂಘದ ಶಿವಶಂಕರ್ ಆರೋಪ ಮಾಡಿದ್ದಾರೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಶಿವಶಂಕರ್, ಕೆಎಸ್​​ಡಿಎಲ್​ ಕರ್ನಾಟಕ ಜನರ ಸ್ವತ್ತು. 107 ವರ್ಷದ ಹಳೆಯ ಸಂಸ್ಥೆಯಾಗಿದ್ದು, ಇಂತಹ ಕಾರ್ಖಾನೆಯಲ್ಲಿ ದೊಡ್ಡ ರೀತಿಯ ಹಗರಣ ನಡೆದಿದೆ. ಹಗರಣದಿಂದ ಸಂಸ್ಥೆ ದಿವಾಳಿಯಾಗಿ 10 ಸಾವಿರ ಕುಟುಂಬಗಳು ಬೀದಿಪಾಲಾಗುತ್ತಿವೆ. 2023-24 ಸಾಲಿನಲ್ಲೇ 15 ಕಚ್ಚಾ ವಸ್ತುಗಳ ಖರೀದಿಯಲ್ಲಿ 139 ಕೋಟಿ ಕಿಕ್ ಬ್ಯಾಕ್ ಹೋಗಿದೆ. ಸೋಪು ತಯಾರಿಕೆಯಲ್ಲಿ ಬೆಲೆ‌ಹೆಚ್ಚಳ ಆಗಿ ಗ್ರಾಹಕರಿಗೆ ತೊಂದರೆ ಆಗುತ್ತಿದೆ. ಭ್ರಷ್ಟಾಚಾರದಿಂದ 10 ಸಾವಿರ ಕಾರ್ಮಿಕರಿಗೆ ತೊಂದರೆ ಆಗಿದೆ. ಇದೇ ರೀತಿ ಮುಂದುವರೆದ್ರೆ ಕಾರ್ಖಾನೆ ಮುಚ್ಚಬೇಕಾದ ಪರಿಸ್ಥಿತಿ ಎದುರಾಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೆಎಸ್ ​ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿ ksdl

ಲೋಕಾಯುಕ್ತ ತನಿಖೆಯಿಂದ ಕೆಎಸ್​ಡಿಲ್ ​ ಅಕ್ರಮ ಬೆಳಕಿಗೆ ಬಂದಿದೆ. ಕೆಎಸ್ ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳ್‌ ವಿರೂಪಾಕ್ಷಪ್ಪ, ಪುತ್ರನ ಬಗ್ಗೆ ಸಹ ಬೆಳಕಿಗೆ ಬಂದಿದೆ. ಕೆಎಸ್​ಡಿಎಲ್ ಭ್ರಷ್ಟಾಚಾರದಲ್ಲಿ ಮತ್ತಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೆಎಸ್​​​​ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇಶ್, ಉಮಾಶಂಕರ್ ಅಪಾಲಿ, ಪರ್ಚೆಸ್ ನೆಗೋಸಿಯೇನ್ ಕಮಿಟಿ ಅಧ್ಯಕ್ಷ ಹಾಗೂ ಪ್ರಧಾನ ವ್ಯವಸ್ಥಾಪಕ ಕೆಎಸ್​ಡಿಎಲ್. ಡಾ. ಚಿದಾನಂದ್, ಆರ್ ಮತ್ತು ಡಿ ವ್ಯವಸ್ಥಾಪಕ ಕೆಎಸ್​​ಡಿಎಲ್. ನಾಗರಾಜ್, ಕ್ಯೂಸಿಡಿ ವ್ಯವಸ್ಥಾಪಕ, ಕೆಎಸ್​​ಡಿಎಲ್. ಸುಂದರ್ ಮೂರ್ತಿ, ಡೆಪ್ಯೂಟಿ ಜನರಲ್ ಮ್ಯಾನೇಜರ್, ಮೆಟೀರಿಯಲ್ಸ್ ಹಾಹೂ ಹಣಕಾಸು ವಿಭಾಗದ ವ್ಯವಸ್ಥಾಪಕ,ಕೆಎಸ್​​ಡಿಎಲ್, ಅವಿನಾಶ್ ಗುಪ್ತಾ, ಪ್ರಧಾನ ವ್ಯವಸ್ಥಾಪಕ, ಹಣಕಾಸು ವಿಭಾಗ, ಕೆಎಸ್​​ಡಿಎಲ್ ಈ ಆರು ಜನ ಅವ್ಯವಹಾರ ನಡೆಸಿದ್ದಾರೆ. ಕೆಎಸ್​​ಡಿಎಲ್ ಎಲ್ಲ ನಿಯಮಗಳನ್ನು ಉಲ್ಲಂಘನೆ ಮಾಡಿದ್ದು, ಆರು ಜನರ ವಿರುದ್ಧ ಶಿಸ್ತು ಜರುಗಿಸಿದರೆ ಸತ್ಯ ಸಂಗತಿ ಬೆಳಕಿಗೆ ಬರಲಿದೆ ಎಂದು ಆರೋಪ ಮಾಡಿದರು.

Key words: Further- Officers -involved – KSDL -corruption- Shivashankar