ಕಿರುತೆರೆ ‘ಟಿಆರ್’ಪಿ’ ದಾಖಲೆ ಬರೆದ ‘ಪುಟ್ಟಕ್ಕನ ಮಕ್ಕಳು’

Promotion

ಬೆಂಗಳೂರು, ಡಿಸೆಂಬರ್ 24, 2021 (www.justkannada.in): ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿರುವ ‘ಪುಟ್ಟಕ್ಕನ ಮಕ್ಕಳು’ ಧಾರವಾಹಿ ಟಿಆರ್ ಪಿಯಲ್ಲಿ ದಾಖಲೆ ಬರೆದಿದೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಈ ಧಾರವಾಹಿ, ಕನ್ನಡ ಕಿರುತೆರೆ ಇತಿಹಾಸದಲ್ಲೇ ಮೊದಲ ವಾರದಲ್ಲೇ ಗರಿಷ್ಠ ಟಿಆರ್ ಪಿ ಪಡೆದ ಖ್ಯಾತಿ ಗಳಿಸಿದೆ.

ಮೊದಲ ವಾರವೇ 13.5 ಟಿಆರ್ ಪಿ ಪಡೆದಿದ್ದು, ಇದು ಓಪನಿಂಗ್ ವಾರದಲ್ಲಿ ಕಂಡ ಗರಿಷ್ಠ ಟಿಆರ್ ಪಿ ಎಂಬ ದಾಖಲೆ ಮಾಡಿದೆ.

ಆರೂರ್ ಜಗದೀಶ್ ನಿರ್ಮಾಣ, ನಿರ್ದೇಶನ ಮಾಡುತ್ತಿರುವ ಧಾರವಾಹಿ ಇದಾಗಿದ್ದು, ಉಮಾಶ್ರೀ ಮತ್ತು ಅವರ ಮೂವರು ಹೆಣ್ಣು ಮಕ್ಕಳ ಮನಮಿಡಿಯುವ ಕತೆಯಿದೆ.