‘ಜೊತೆಜೊತೆಯಲಿ’ ‘ಮೆಟ್ರೋ’ ಪ್ರಯಾಣ… ! ಅಭಿಮಾನಿಗಳ ಸೆಲ್ಫಿ ಸಂಭ್ರಮ…

Promotion

ಬೆಂಗಳೂರು, ನವೆಂಬರ್ 13, 2019 (www.justkannada.in): ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ‘ಜೊತೆಜೊತೆಯಲಿ’ ಧಾರವಾಹಿ ಶೂಟಿಂಗ್ ಬೆಂಗಳೂರಿನ ‘ಮೆಟ್ರೋ’ದಲ್ಲಿ ನಡೆದಿದೆ.

ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ್ ಹಾಗೂ ಅನು ಸಿರಿಮನೆ ಪಾತ್ರಧಾರಿ ಮೇಘಾ ಶೆಟ್ಟಿ ಅವರು ಮೆಟ್ರೋದಲ್ಲಿ ಜೊತೆಜೊತೆಯಾಗಿ ಪ್ರಯಾಣ ಮಾಡುವ ಚಿತ್ರೀಕರಣವನ್ನು ಮಾಡಲಾಯಿತು.

ಇವರನ್ನು ನೋಡಿದ್ದೆ ತಡ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಅಭಿಮಾನಿಗಳು ಅವರನ್ನು ಮುತ್ತಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಲ್ಲದೇ, ಧಾರವಾಹಿ ಹೀಗೆ ಮುನ್ನಡೆಯಲಿ ಎಂದು ಶುಭ ಹಾರೈಸಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.