ಮಾಲಯಾಳಂನಲ್ಲಿ ಕೆಜಿಎಫ್-2ಗೆ ಪೃಥ್ವಿರಾಜ್ ಸಾಥ್ !

Promotion

ಬೆಂಗಳೂರು, ಜನವರಿ 05, 2020 (www.justkannada.in): 

ಕೆಜಿಎಫ್-2 ಸಿನಿಮಾದ ಮಾಲಯಾಳಂ ವರ್ಷನ್ ಗೆ ಮಾಲಿವುಡ್ ಸ್ಟಾರ್ ಹೀರೋ ಪೃಥ್ವಿರಾಜ್ ಸುಕುಮಾರ್ ಸಾಥ್ ಕೊಟ್ಟಿದ್ದಾರೆ.

ಪೃಥ್ವಿರಾಜ್ ‘ಪೃಥ್ವಿರಾಜ್ ಪ್ರೊಡಕ್ಷನ್’ ನಲ್ಲಿ ಮಾಲಯಾಳಂನಲ್ಲಿ ಕೆಜಿಎಫ್-2 ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. ಈ ಬಗ್ಗೆ ಸ್ವತಃ ಪೃಥ್ವಿರಾಜ್ ಸುಕುಮಾರ್ ಹೇಳಿದ್ದಾರೆ.

ನಾನು ಕೆಜಿಎಫ್ ಫ್ರಾಂಚೈಸಿಯ ದೊಡ್ಡ ಫ್ಯಾನ್ . ಲೂಸಿಫರ್ ಸಿನಿಮಾ ಮಾಡಿದ ಬಳಿಕ ನನ್ನ ಮೊದಲು ಸಂಪರ್ಕಿಸಿ, ಮಾತನಾಡಿದವರಲ್ಲಿ ಹೊಂಬಾಳೆ ಫಿಲ್ಮ್ಸ್ ಮೊದಲಿಗರು. ಪೃಥ್ವಿರಾಜ್ ಪ್ರೊಡಕ್ಷನ್ ಬಹಳ ಹೆಮ್ಮೆಯಿಂದ ಈ ಸಿನಿಮಾವನ್ನು ಅರ್ಪಿಸುತ್ತದೆ ಎಂದಿದ್ದಾರೆ ಪೃಥ್ವಿರಾಜ್.