ಆಯಾತಪ್ಪಿ ಬಿದ್ದು ಬೈಕ್ ಸವಾರರಿಬ್ಬರು ಸಾವು….

Promotion

ಚಾಮರಾಜನಗರ,ಸೆ,26,2019(www.justkannada.in): ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಆಯಾತಪ್ಪಿ ಬಿದ್ದು ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನಲ್ಲಿ ನಡೆದಿದೆ.

ಯಳಂದೂರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಈ  ಘಟನೆ ನಡೆದಿದೆ. ಹೊನ್ನೂರು ಗ್ರಾಮದ ಮಲ್ಲೇಶ್ (45), ಮಹೇಶ್ (35)  ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತದೇಹಗಳನ್ನ ಈಗಾಗಲೇ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಕುರಿತು ಯಳಂದೂರು ಪೋಲಿಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: yalandur-two-bike rider-fall- dead