ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​: ಯಶಸ್ಸಿನ ತುತ್ತ ತುದಿಯಲ್ಲಿ ಟೀಂ ಇಂಡಿಯಾ !

Promotion

ಮುಂಬೈ, ನವೆಂಬರ್ 25, 2019 (www.justkannada.in): ಬಾಂಗ್ಲಾದೇಶ ವಿರುದ್ಧ ನಡೆದ ಡೇ ನೈಟ್ ಟೆಸ್ಟ್ ಗೆಲ್ಲುವ ಮೂಲಕ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮತ್ತೆ 60 ಅಂಕ ಗಳಿಸಿದೆ.

ಈ ಮೂಲಕ ಟೆಸ್ಟ್​ ಚಾಂಪಿಯನ್​ಶಿಪ್ ಶುರುವಾಗಿನಿಂದ ಇಲ್ಲಿಯವರೆಗೆ ಒಟ್ಟು 360 ಪಾಯಿಂಟ್ಸ್​ ಕಲೆಹಾಕಿ ಅಗ್ರಸ್ಥಾನದಲ್ಲಿದೆ. ಇನ್ನು ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯನ್ನರು 116 ಪಾಯಿಂಟ್ಸ್​ ಹೊಂದಿದ್ದಾರೆ.

ತದನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್(60), ಶ್ರೀಲಂಕಾ (60), ಇಂಗ್ಲೆಂಡ್​(56) ಸೇರಿದಂತೆ ಇನ್ನಿತರ ದೇಶಗಳಿವೆ 2021ರಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ನ ಫೈನಲ್​​ ನಡೆಯಲಿದ್ದು, ಈಗಾಗಲೇ ಭರ್ಜರಿ ಪಾಯಿಂಟ್ಸ್​ ಕೂಡಿಹಾಕಿರುವ ಟೀಂ ಇಂಡಿಯಾ ಅಗ್ರಸ್ಥಾನದ ಮೂಲಕ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದೆ.