ವಿಶ್ವಕಪ್ ಕ್ರಿಕೆಟ್: ಗೆಲುವಿನ ಖಾತೆ ತೆರೆದ ಟೀಂ ಇಂಡಿಯಾ !

Promotion

ಇಂಗ್ಲೆಂಡ್, ಜೂನ್ 06, 2019 (www.justkannada.in): ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವು ದಾಖಲಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ.

ಸೌತ್ ಆಂಪ್ಟನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 6 ವಿಕೆಟ್ ಗಳ ಜಯಗಳಿಸಿದೆ. 4 ವಿಕೆಟ್ ಪಡೆದ ಯಜುವೇಂದ್ರ ಚಹಾಲ್ ನೆರವಿನಿಂದ ಭಾರತ ತಂಡ ಎದುರಾಳಿ ತಂಡವನ್ನು ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 227 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು.

ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಭಾರತ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ನಿಂದ ಗೆಲುವಿನ ನಗೆ ಬೀರಿತು.