ವಿಶ್ವಕಪ್ ಕ್ರಿಕೆಟ್: ಥೀಮ್ ಸಾಂಗ್ ಬಿಡುಗಡೆ ಮಾಡಿದ ಐಸಿಸಿ

Promotion

ಲಂಡನ್, ಮೇ, 18, 2019 (www.justkannada.in): ಮುಂಬರುವ ವಿಶ್ವಕಪ್ ಕ್ರಿಕೆಟ್‌ನ ಅಧಿಕೃತ ಹಾಡನ್ನು ಐಸಿಸಿ ಬಿಡುಗಡೆ ಮಾಡಿದೆ.

ಯುವ ಪ್ರತಿಭೆ ಲೊರಿನ್ ಹಾಗೂ ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಹಾಗೂ ಪ್ರಭಾವಿ ಸಂಗೀತ ತಂಡ ರುಡಿಮೆಂಟಲ್ ಜಂಟಿಯಾಗಿ’ಸ್ಟಾಂಡ್ ಬೈ’ ಹಾಡು ರೂಪಿಸಿದ್ದಾರೆ.

ಈ ಹಾಡನ್ನು ಮೇ 30 ರಂದು ವಿಶ್ವಕಪ್‌ನ ಮೊದಲ ದಿನ ಟೂರ್ನಮೆಂಟ್‌ನ ಆತಿಥ್ಯವಹಿಸಿರುವ ಎಲ್ಲ ಮೈದಾನ ಹಾಗೂ ನಗರಗಳಲ್ಲಿ ನುಡಿಸಲಾಗುತ್ತದೆ.

ವಿಶ್ವಕಪ್ ಕ್ರಿಕೆಟ್ ಜಾಗತಿಕ ಮಟ್ಟದ ಅತ್ಯಂತ ದೊಡ್ಡ ಕ್ರೀಡಾ ಟೂರ್ನಿಯಾಗಿದ್ದು, ಮೇ 30 ರಿಂದ 46 ದಿನಗಳ ಕಾಲ 11 ತಾಣಗಳಲ್ಲಿ ನಡೆಯಲಿದೆ. ಕೋಟ್ಯಂತರ ಅಭಿಮಾನಿಗಳನ್ನು ಆಕರ್ಷಿಸಲಿದೆ.