ವಿಶ್ವಕಪ್ ಕ್ರಿಕೆಟ್: ಇಂಡಿಯಾ-ಅಫ್ಘಾನ್ ಕದನಕ್ಕೆ ಕ್ಷಣಗಣನೆ

Promotion

ಸೌತಾಂಪ್ಟನ್, ಜೂನ್ 22, 2019 (www.justkannada.in): ಆಡಿದ 3 ಪಂದ್ಯಗಳನ್ನು ಭರ್ಜರಿಯಾಗಿ ಜಯಿಸಿರುವ ಟೀಂ ಇಂಡಿಯಾ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಇಂದು ಸೌತಂಪ್ಟನ್ ನ ರೋಸ್ ಬೌಲ್ ಮೈದಾನದಲ್ಲಿ ಇಂದು ಐಸಿಸಿ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿರುವ ಟೀಂ ಇಂಡಿಯಾ ಆಫ್ಘಾನಿಸ್ತಾನ ವಿರುದ್ಧ ಮತ್ತೊಂದು ಜಯದೊಂದಿಗೆ ವಿಜಯಯಾತ್ರೆ ಮುಂದುವರಿಸಲು ಸಜ್ಜಾಗಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ರದ್ದಾಗಿತ್ತು.

ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ನಲ್ಲಿ ವಿರಾಟ್ ಕೊಹ್ಲಿ ಬಳಗ ಪ್ರಬಲವಾಗಿದ್ದು, ಇಂದಿನ ಪಂದ್ಯವನ್ನು ಜಯಿಸುವ ಉತ್ಸಾಹದಲ್ಲಿದೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 104 ರನ್ ಗಳಿಸಿದರೆ ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಕಡಿಮೆ ಇನಿಂಗ್ಸ್ ನಲ್ಲಿ 20 ಸಾವಿರ ರನ್ ಗಡಿ ದಾಟಲಿದ್ದಾರೆ.