ವಿಧಾನಸೌಧದಲ್ಲಿ ಇಂಟೆರ್‌ ನೆಟ್ ನಿಲುಗಡೆಯಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕೆಲಸಗಳು.

ಬೆಂಗಳೂರು, ಆಗಸ್ಟ್ 11, 2022(www.justkannada.in): ರಾಜ್ಯದ ಶಕ್ತಿಸೌಧವಾದ ವಿಧಾನ ಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಬುಧವಾರದಂದು ಇಂಟೆರ್‌ ನೆಟ್ ನಿಲುಗಡೆಗೊಂಡ ಕಾರಣದಿಂದಾಗಿ ಹಲವು ಗಂಟೆಗಳ ಕಾಲ ಆಡಳಿತಾತ್ಮಕ ಕೆಲಸಗಳು ಸ್ಥಗಿತಗೊಂಡವು.

ಸಾಫ್ ವೇರ್ ಉನ್ನತೀಕರಣ ಕಾಮಗಾರಿಗಳೇ ಇಂಟೆರ್‌ನೆಟ್ ಸಮಸ್ಯೆಗೆ ಕಾರಣ ಎಂದು ಸಂಬAಧಪಟ್ಟ ಪ್ರಾಧಿಕಾರಿಗಳು ತಿಳಿಸಿದರಾದರೂ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ತಮಗೆ ಈ ಕುರಿತು ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ ಎಂದು ತಿಳಿಸಿದರು.

ನಿನ್ನೆ ಬೆಳಿಗ್ಗೆಯಿಂದಲೇ ಇಂಟೆರ್‌ ನೆಟ್ ನಿಲುಗಡೆಗೊಂಡ ಕಾರಣದಿಂದಾಗಿ ಕಡತಗಳ ಚಲನೆಗೆ ತಡೆಯಾಯಿತು. ಬಹುಪಾಲು ಕಡತಗಳ ಚಲನೆ, ಕಾಗದರಹಿತ ಸಾಫ್ಟ್ವೇರ್ ವ್ಯವಸ್ಥೆ ಇ-ಕಚೇರಿ ಮೂಲಕ ನಡೆಯುತ್ತದೆ.

ಇಂಟೆರ್‌ ನೆಟ್ ನಿಲುಗಡೆಯಿಂದಾಗಿ ಬಹಳ ಮುಖ್ಯವಾದ ಹಾಗೂ ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕಾದ ಕೆಲವು ಕಡತಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳೂ ಹೆಣಗಾಡಬೇಕಾಯಿತು. ಕೆಲವರು ತಮ್ಮ ಮೊಬೈಲ್ ಫೋನ್‌ ಗಳ ಇಂಟೆರ್‌ ನೆಟ್ ಅನ್ನು ಬಳಸಬೇಕಾಯಿತು. “ನ್ಯಾಯಾಲಯದ ಪ್ರಕರಣಗಳಿಗೆ ಸಂಬಂಧಪಟ್ಟ ಕೆಲವು ಮುಖ್ಯವಾದ ಕಡತಗಳನ್ನು ತೀರುವಳಿ ಮಾಡಬೇಕಾಗಿತ್ತು. ಬೇರೆ ಆಯ್ಕೆ ಇಲ್ಲದೆ, ನಮ್ಮ ಮೊಬೈಲ್ ಡೇಟಾವನ್ನೇ ಬಳಸಿಕೊಂಡು ವಿಲೇವಾರಿ ಮಾಡಬೇಕಾಯಿತು,” ಎಂದು ಓರ್ವ ಅಧಿಕಾರಿ ತಿಳಿಸಿದರು.

“ಒಂದು ವೇಳೆ ಸಾಫ್ಟ್ ವೇರ್ ಉನ್ನತೀಕರಣ ಕೆಲಸವಿದಿದ್ದರೆ, ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೂ ಮುಂಚಿತವಾಗಿಯೇ ತಿಳಿಸಬೇಕಾಗಿತ್ತು. ಆದರೆ, ನಾವು ಬುಧವಾರ ಬೆಳಿಗ್ಗೆ ಕಚೇರಿಗೆ ಬಂದಾಗಲೇ ಆ ಕುರಿತು ನಮಗೆ ತಿಳಿದದ್ದು,” ಎಂದು ಉನ್ನತ ಶಿಕ್ಷಣ ಇಲಾಖೆಯ ಓರ್ವ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.covid-dead-body-cancels-license-order-state-government

ವಿವಿಧ ಇಲಾಖೆಗಳ ಉದ್ಯೋಗಿಗಳು, ಸಾಫ್ಟ್ ವೇರ್ ಉನ್ನತೀಕರಣ ಕೆಲಸದಿಂದಾಗಿ ಇಂಟೆರ್‌ ನೆಟ್ ಸರಬರಾಜಿನಲ್ಲಿ ತಡೆ ಉಂಟಾಗಿರುವುದಾಗಿ ನಮಗೆ ತಿಳಿಸಲಾಯಿತು ಎಂದರು. “ಒಂದು ವೇಳೆ ಅದೇ ಕಾರಣವಾಗಿದ್ದರೆ ಮಂಗಳವಾರದಂದೇ ಆ ಬಗ್ಗೆ ನಮಗೆ ಏಕೆ ತಿಳಿಸಲಿಲ್ಲ. ಮಂಗಳವಾರ ಮೊಹರಂ ಹಬ್ಬವಿದ್ದ ಕಾರಣದಿಂದಾಗಿ ಸರ್ಕಾರಿ ರಜೆಯಿತ್ತು,” ಎಂದು ಓರ್ವ ಅಧಿಕಾರಿ ಪ್ರಶ್ನಿಸಿದರು. ಬಹುಮಹಡಿ ಕಟ್ಟಡದಲ್ಲಿ ಇಂಟರ್‌ ನೆಟ್ ಸಂಪರ್ಕವನ್ನು ಸಂಜೆ 5 ಗಂಟೆಗೆ, ಉದ್ಯೋಗಿಗಳು ಮನೆಗೆ ಹೊರಡಲು ಸಿದ್ಧವಾಗುತ್ತಿದ್ದಾಗ ಪುನರ್‌ ಸ್ಥಾಪಿಸಲಾಯಿತು.

ಈ ಕುರಿತು ಇ-ಆಡಳಿತ ವಿಭಾಗದ ಕಾರ್ಯದರ್ಶಿ ವಿ. ಪೊನ್ನುರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಸಾಫ್ಟ್ ವೇರ್ ಅಪ್‌ಗ್ರೇಡ್ ಹಾಗೂ ಕಾನ್ಫಿಗರೇಷನ್‌ನಿಂದಾಗಿ ಇಂಟೆರ್‌ನೆಟ್ ನಿಲುಗಡೆಯಾಗಿತ್ತು. “ಉನ್ನತೀಕರಣದ ಅಗತ್ಯವಿದ್ದ ಸುಮಾರು ೧,೩೦೦ ಘಟಕಗಳ ಪೈಕಿ, ೩೫೦-೪೦೦ ಘಟಕಗಳಲ್ಲಿ ಉನ್ನತೀಕರಣ ಕೆಲಸಗಳನ್ನು ಬುಧವಾರದಂದೇ ಪೂರ್ಣಗೊಳಿಸಲಾಗಿದೆ,” ಎಂದು ತಿಳಿಸಿದರು. ಈ ಉನ್ನತೀಕರಣ ಕಾಮಗಾರಿಗಳನ್ನು ೨-೩ ವರ್ಷಗಳಿಗೊಮ್ಮೆ ಕೈಗೊಳ್ಳಲಾಗುತ್ತದೆ ಎಂದು ಪೊನ್ನುರಾಜ್ ವಿವರಿಸಿದರು.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: Work- temporarily -halted -due – internet – Vidhana Soudha