ನಿಮಗೆ ತಾಕತ್ ಇದ್ರೆ ಒಂದು ವಾರದೊಳಗೆ ಮೇಕೆದಾಟು ಯೋಜನೆಗೆ ಶಂಕು ಸ್ಥಾಪನೆ ಮಾಡಿ- ಸಿಎಂ ಬಿಎಸ್ ವೈಗೆ ವಾಟಾಳ್ ನಾಗರಾಜ್ ಸವಾಲು.

Promotion

ಮೈಸೂರು,ಜುಲೈ,7,2021(www.justkannada.in): ಯಡಿಯೂರಪ್ಪ ನಿಮಗೆ ತಾಕತ್ ಇದ್ರೆ, ಗಂಡಸ್ಥನ ಇದ್ರೆ ಒಂದು ವಾರದೊಳಗೆ ಮೇಕೇದಾಟು ಯೋಜನೆಗೆ ಶಂಕುಸ್ಥಾಪನೆ ಮಾಡಿ ಎಂದು ಕನ್ನಡ ಚಳುವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸವಾಲು ಹಾಕಿದರು.jk

ಮೈಸೂರಿನಲ್ಲಿ ಮೇಕೆದಾಟು ಯೋಜನೆ ವಿಳಂಬಕ್ಕೆ ಯಡಿಯೂರಪ್ಪ ವಿರುದ್ಧ  ವಾಗ್ದಾಳಿ ನಡೆಸಿದ ವಾಟಾಳ್ ನಾಗರಾಜ್, ಮೇಕೆದಾಟು ಯೋಜನೆ ಯಡಿಯೂರಪ್ಪನ ಸರ್ಕಾರ ಕಾರಣ. ಹಿಂದೆ ಇದ್ದ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಕೂಡ ಕಾರಣ. ಮೇಕೆದಾಟು ಯೋಜನೆ ಪ್ರಾರಂಭಿಸುತ್ತೇವೆ ಎಂದು ಹೇಳುತ್ತೀರಿ. ಅದಕ್ಕೆ ಏನು ತಯಾರಿ ಮಾಡಿಕೊಂಡಿದ್ದೀರಿ ಹೇಳಿ. ನೀಲಿನಕ್ಷೆ ತಯಾರು ಮಾಡಿಕೊಂಡಿದ್ದೀರಾ. ಸರ್ಕಾರದಿಂದ ಈ ಯೋಜನೆಗೆ ಎಷ್ಟು ಹಣ ಬಿಡುಗಡೆ ಮಾಡಿದ್ದೀರಿ ತಿಳಿಸಿ. ಈ ಯೋಜನೆ ಸ್ಥಳ ಯಾವುದು. ಮೇಕೆದಾಟು ವಿಳಂಬವಾಗುತ್ತಿರುವುದು ಕರ್ನಾಟಕದಿಂದಲೇ. ಮೇಕೆದಾಟು ಆರಂಭವಾಗದಿರಲು ಕಾಂಗ್ರೆಸ್, ಬಿಜೆಪಿ ಹಾಗೂ ಜಂಟಿ ಸರ್ಕಾರ ಹೊಣೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಆಗಬೇಕು, ದರ್ಬಾರ್ ಮಾಡಬೇಕು ಇದಿಷ್ಟೆ. ಜನರ ಬಗ್ಗೆ ಇವರಿಗೆ ಚಿಂತೆ ಇಲ್ಲ. ಮೇಕೆಧಾಟು ಯೋಜನೆ ಬಗ್ಗೆ ತಮಿಳುನಾಡಿನ ಮುಖ್ಯಮಂತ್ರಿಗೆ ಏಕೆ ಪತ್ರ ಬರೆದಿರಿ. ಈ‌ಮುಲಕ ಕರ್ನಾಟಕದ ಹಿತವನ್ನು ಹಾಗೂ ಕರ್ನಾಟಕ ಜನತೆಗೆ ಅಗೌರವ ಉಂಟು ಮಾಡಿದ್ದಾರೆ. ಯಡಿಯೂರಪ್ಪ ರವರೇ ಮೇಕೆದಾಟು ಯೋಜನೆ ಆರಂಭಿಸಲು ಯಾವ ಕ್ರಮ ತೆಗೆದುಕೊಂಡಿದ್ದೀರಿ. ಇದು ಕಡಲೆಪುರಿ ತಿನ್ನುವ ರೀತಿಯಲ್ಲ.ತಮಿಳುನಾಡಿನವರು ಹೆಜ್ಜೆ ಹೆಜ್ಜೆಗೂ ತೊಂದರೆ ಕೊಡುತ್ತಿದ್ದಾರೆ. ಯಡಿಯೂರಪ್ಪರವರೇ ನಿಮಗೆ ಗಂಡಸುತನ, ತಾಕತ್ತು ಇದ್ದರೆ ಒಂದು ವಾರದಲ್ಲಿ ಯೋಜನೆ ಚಾಲನೆ ನೀಡಿ. ಇಲ್ಲ ರಾಜಿನಾಮೆ ನೀಡಬೇಕು. ತಮಿಳುನಾಡಿ ನಲ್ಲಿ ದೊಡ್ಡ‌ ನದಿ‌ ಜೋಡಣೆ ಕೆಲಸ ಕಳೆದ 06 ತಿಂಗಳಿಂದ ಆರಂಭವಾಗಿದೆ. ತಮಿಳುನಾಡಿನಲ್ಲಿ ಏನು ನಡೆಯುತ್ತಿದೆ ಎಂಬುದೇ ಯಡಿಯೂರಪ್ಪ ಗೆ ಗೊತ್ತಿಲ್ಲ. ಮೋದಿ ರವರಿಗೆ ಕರ್ನಾಟಕದ ಮೇಲೆ‌ ಗೌರವ ಇದ್ದರೆ ಯೋಜನೆ ಗೆ ಹಣ ನೀಡಿ.ಇಲ್ಲದಿದ್ದರೆ ರಾಮನಗರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುತ್ತದೆ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

SSLC ಪರೀಕ್ಷೆ ರದ್ದು ಮಾಡಿ‌ ಸುರೇಶ್ ಕುಮಾರ್.

SSLC ಪರೀಕ್ಷೆ ರದ್ದು ಮಾಡಿ‌ ಸುರೇಶ್ ಕುಮಾರ್ ಎಂದು ಆಗ್ರಹಿಸಿದ ವಾಟಾಳ್ ನಾಗರಾಜ್, PUC ಖಾಸಗಿ ವಿದ್ಯಾರ್ಥಿಗಳನ್ನು ಕೂಡಲೇ ಪಾಸ್ ಮಾಡಿ. ಹಠಕ್ಕೆ ಬಿದ್ದು ಪರೀಕ್ಷೆ ಮಾಡುವುದು ಬೇಡ. ಕೂಡಲಲೇ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡಿ ಎಂದು ಒತ್ತಾಯಿಸಿದರು.

ಯತ್ನಾಳ್  ಸಿಎಂ ಬದಲಾವಣೆಗೆ ಪ್ರಯತ್ನಪಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್, ಯತ್ನಾಳ್ ಟುಸ್ ಪಟಾಕಿ. ಯಡಿಯೂರಪ್ಪ ಭ್ರಷ್ಟಾಚಾರಿ ಇವರನ್ನು ತೆಗೆಯಲು ಯತ್ನಾಳ್ ರಿಂದ ಆಗುವುದಿಲ್ಲ. ‌ ನೂರು ಜನ ಯತ್ನಾಳ್ ಬಂದರು ಸಾಧ್ಯವಿಲ್ಲ. ಕೇಂದ್ರ ಸರ್ಕಾರವೇ‌ ಹಿಂದೆ ಮುಂದೆ ನೋಡುತ್ತಿದೆ. ಯಡಿಯೂರಪ್ಪ ಈ ರಾಜ್ಯದ ಮುಖ್ಯಮಂತ್ರಿ ಹುದ್ದೆಯಿಂದ ತೆಗೆದರೆ ಬಿಜೆಪಿಯ ಪಕ್ಷ ಉಳಿಯುವುದಿಲ್ಲ. ಯಡಿಯೂರಪ್ಪ ಬಹಳ‌ ಮಾಯಾವಿ. ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದೇ ಭ್ರಷ್ಟ ಮಾರ್ಗದಿಂದ. ಬಳ್ಳಾರಿ ಹಣದಿಂದ ಅಧಿಕಾರ ಪಡೆದಿದ್ದಾರೆ. ಯತ್ನಾಳ್ ಯೋಗೇಶ್ವರಂತವರಿಂದ ಸಿಎಂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಡಿಯೂರಪ್ಪ ಕೆಳಗಿಳಿಸಿದರೆ ಕೆಲ ಬೆಂಬಲಿಗರೊಡನೆ ಹೊರಗೆ ಹೊಗ್ತಾರೆ. ಹಾಗಾಗಿ ಇವರ ಪ್ರಯತ್ನ ಠುಸ್ ಠುಸ್ ಠುಸ್ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ‌ಪಕ್ಷದಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ ಹಾಗೂ ಸೈಕಲ್ ಜಾಥಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್,  ಸೈಕಲ್ ಚಳವಳಿ ನಮ್ಮ ಕಾರ್ಯಕ್ರಮ. ಇದರಿಂದ ನಮಗೆ ಸಂತೋಷವಾಗಿದೆ. ನಾನು ಇಲ್ಲೇ ಈ ಹಿಂದೆ ಸೈಕಲ್ ಚಳವಳಿ ಮಾಡಿದ್ದೆ. ನಾನು‌ ಮಾಡಿರುವಷ್ಟು ಚಳವಳಿ ಪ್ರಪಂಚದಲ್ಲಿ ಯಾರು ಮಾಡಿಲ್ಲ. ಕಾಂಗ್ರೆಸ್ ನಲ್ಲಿ‌ ಯಾರೇ ಮುಖ್ಯಮಂತ್ರಿ ಆದರೂ ಏನೂ ಬದಲಾವಣೆ ಆಗುವುದಿಲ್ಲ.  ಕಾಂಗ್ರೆಸ್ ಪಕ್ಷ ಬಂದರೂ 100.ರೂ ಇರುವ ಪೆಟ್ರೋಲ್ ಬೆಲೆ 130ರೂ. ಆಗುತ್ತದೆ ಅಷ್ಟೇ. ಕಡಿಮೆ ಏನು ಆಗುವುದಿಲ್ಲ ಎಂದು ಟಾಂಗ್ ನೀಡಿದರು.

Key words: within -week – mekedatu-project-mysore-vatal Nagaraj –challenges- CM BS Yeddyurappa