ವಿಂಡೀಸ್ ವಿರುದ್ಧ ಟೀಂ ಇಂಡಿಯಾಗೆ ಮಾಡು ಇಲ್ಲವೇ ಮಡಿ ಪಂದ್ಯ

Promotion

ಬೆಂಗಳೂರು, ಡಿಸೆಂಬರ್ 18, 2019 (www.justkannada.in): ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ, ವೈಜಾಗ್​ನಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

ಕೆ.ಎಲ್.ರಾಹುಲ್ ಮತ್ತು ನಾಯಕ ವಿರಾಟ್ ಕೊಹ್ಲಿ, ವಿಂಡೀಸ್ ಬೌಲರ್​ಗಳ ವಿರುದ್ಧ ಮುಗ್ಗರಿಸಿಸಿದ್ರು. ಹೀಗಾಗಿ ವೈಜಾಗ್ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್​ಮನ್​ಗಳು, ರನ್​ಮಳೆ ಸುರಿಸಬೇಕಿದೆ.

ಟಿಂಗ್​ ಲೈನ್​ಅಪ್​ನಲ್ಲಿ ಟೀಮ್ ಮ್ಯಾನೇಜ್​ಮೆಂಟ್ ಹೆಚ್ಚು ಎಕ್ಸ್​ಪೀರಿಮೆಂಟ್ ಮಾಡಬಾರದು. ರಿಶಬ್ ಪಂತ್, ಶಿವಂ ಡುಬೆರಂತಹ ಯುವ ಬ್ಯಾಟ್ಸ್​ಮನ್​ಗಳ ಮೇಲೆ ಹೆಚ್ಚು ಒತ್ತಡ ಹೇರೋದನ್ನ ನಿಲ್ಲಸಬೇಕಿದೆ.