ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಬಾಕ್ಸ್ ಆಫೀಸ್ ಸುಲ್ತಾನ

ಬೆಂಗಳೂರು, ಡಿಸೆಂಬರ್ 18, 2019 (www.justkannada.in): ಚಾಲೆಂಜಿಂಗ್ ​ಸ್ಟಾರ್ ​ದರ್ಶನ್ ​​ ‘ಒಡೆಯ’ ಸಿನಿಮಾ ಉತ್ತಮ ವಿಮರ್ಶೆ ಪಡೆದು ಮುನ್ನುಗ್ಗುತ್ತಿದ್ದು, ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ.

ಈ ಖುಷಿಯಲ್ಲಿರುವ ಬಾಕ್ಸ್ ​ ಆಫೀಸ್ ​​ ಸುಲ್ತಾನ್ ದರ್ಶನ್ ​​​​, ಟ್ವೀಟ್ ​ ಮಾಡಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಕಳೆದ ವರ್ಷ ಯಾವುದೇ ಚಿತ್ರ ಬಿಡುಗಡೆಯಾಗದಿದ್ದರೂ , ತಾಳ್ಮೆಯಿಂದ ಕಾದು ಈ ವರ್ಷ ರಿಲೀಸಾದ 3 ಚಿತ್ರಗಳಿಗೂ ನೀವು ತೋರಿರುವ ಪ್ರೀತಿ ಹಾಗೂ ಅಭಿಮಾನಕ್ಕೆ ಧನ್ಯವಾದಗಳು ಎಂದಿದ್ದಾರೆ.

ಮನೆಮಂದಿಯೆಲ್ಲರ ಜೊತೆಗೆ ಬಂದು ಆಶೀರ್ವದಿಸುತ್ತಿರುವ ಪ್ರೇಕ್ಷಕ ಸಮೂಹಕ್ಕೆ ಹಾಗೂ ಶುಭ ಕೋರಿದ ನನ್ನ ಎಲ್ಲಾ ಸೆಲೆಬ್ರಿಟಿಗಳು ಹಾಗೂ ಸ್ನೇಹಿತರಿಗೂ ಸದಾ ಚಿರಋಣಿ ಅಂತಾ ದರ್ಶನ್ ​​ ಟ್ವೀಟ್ ದಚ್ಚು ​ಮಾಡಿದ್ದಾರೆ .