ಪತ್ನಿಯ ಶೋಕಿ ಜೀವನಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆಗೆ ಶರಣು.

Promotion

ಬೆಂಗಳೂರು,ಮೇ,12,2023(www.justkannada.in): ಪತ್ನಿಯ ಶೋಕಿ ಜೀವನಕ್ಕೆ ಬೇಸತ್ತು ಇಬ್ಬರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಗರದ ಆನೇಕಲ್ ನಲ್ಲಿ ಈ ಘಟನೆ ನಡೆದಿದೆ. ಹರೀಶ್ (35) ತನ್ನ ಮಕ್ಕಳಾದ ಪ್ರಜ್ವಲ್ (6)  ರಿಷಬ್ (4) ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.  ಮೇ 10 ರಂದು ನಡೆದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಪತ್ನಿ ಅನನ್ಯ ಹೈಫೈ ಜೀವನದಿಂದ  ಪದೇ ಪದೇ ಗಲಾಟೆಯಾಗುತ್ತಿತ್ತು. ಹರೀಶ್ ಮತ್ತು ಅನನ್ಯ ನಡುವೆ  2015ರಲ್ಲಿ ಹಿರಿಯರ ಮ್ಮುಖದಲ್ಲಿ ರಾಜಿಯಾಗಿತ್ತು. ನಂತರ ಪೋಷಕರೊಂದಿಗೆ ಹರೀಶ್ ವಾಸಿಸುತ್ತಿದ್ದು ಪ್ರತ್ಯೇಕ ಮನೆ ಮಾಡುವಂತೆ ಪತ್ನಿ ಅನನ್ಯ ಪಟ್ಟು ಹಿಡಿದಿದ್ದಳಂತೆ. ಹೀಗಾಗಿ ಹರೀಶ್  2021ರಲ್ಲಿ ಪ್ರತ್ಯೇಕ ಮನೆ ಮಾಡಿ ವಾಸಿಸುತ್ತಿದ್ದರು.

ಇದಾದ ಬಳಿಕ ಅನನ್ಯ ಬೇರೋಬ್ಬನ ಜೊತೆ  ಓಡಿ ಹೋಗಿದ್ದಳು ಎನ್ನಲಾಗಿದೆ. ನಂತರವೂ ಸಹ ಪತಿ ಹರೀಶ್ ಗೆ ಕರೆ ಮಾಡಿ ಹಣ ನೀಡುವಂತೆ ಪದೇ ಪದೇ ಕಿರುಕುಳ ನೀಡುತ್ತಿದ್ದಳು. ಇತ್ತೀಚೆಗೆ ಹರೀಶ್ ತಾಯಿಗೂ ಕರೆ ಮಾಡಿ ಗಲಾಟೆ ಮಾಡಿದ್ದಳು  ಎಂಬ ಆರೋಪ ಕೇಳಿ ಬಂದಿದೆ.

ಇದರಿಂದ ಬೇಸತ್ತ ಹರೀಶ್ ತನ್ನ ಇಬ್ಬರು ಮಕ್ಕಳೊಂದಿಗೆ  ಆತ್ಮಹತ್ಯೆಗೆ ಶರಣಾಗಿದ್ದಾರೆ.  ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: wife-life-husband- committed –suicide- with- two children