ನಾಳೆ ಮತ ಎಣಿಕೆಗೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ: ಡಿ.ಜೆ ಬಳಕೆ ಮತ್ತು ವಿಜಯೋತ್ಸವ ಮೆರವಣಿಗೆಗೆ ನಿರ್ಬಂಧ.

ಮೈಸೂರು,ಮೇ,12,2023(www.justkannada.in): ನಾಳೆ ರಾಜ್ಯ ವಿಧಾನಸಭಾ ಫಲಿತಾಂಶ ಪ್ರಕಟವಾಗಲಿದ್ದು ಮತ ಎಣಿಕೆಗೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮತ ಎಣಿಕೆ ಕೇಂದ್ರದ  200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಮೈಸೂರು ನಗರದಲ್ಲಿ  5 ಜನಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಡಿ.ಜೆ ಬಳಕೆ, ವಿಜಯೋತ್ಸವ ಮೆರವಣಿಗೆಗೆ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ನಿರ್ಬಂಧ ವಿಧಿಸಿದ್ದಾರೆ.

ಇನ್ನು ರಾಜ್ಯಾದ್ಯಂತ ಮತ ಎಣಿಕೆ ಕೇಂದ್ರಗಳಲ್ಲಿ ಪೊಲೀಸ್ ಭದ್ರತೆ.  ಮತ ಎಣಿಕೆಗೆ ಜಿಲ್ಲಾಡಳಿತಗಳಿಂದ ಸಕಲ ಸಿದ್ದತೆ ಪೂರ್ಣಗೊಂಡಿದೆ.  . ರಾಜ್ಯಾದ್ಯಂತ ಚುನಾವಣಾಧಿಕಾರಿ, ಪೊಲೀಸರು ಅಲರ್ಟ್ ಆಗಿದ್ದು,  ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.

Key words: Mysore -district – prepared – vote counting –tomorrow