ಬಳ್ಳಾರಿಯ ಜಿಂದಾಲ್​ ಕಾರ್ಖಾನೆಗೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಬಂದಿದ್ದೇಕೆ?!

Promotion

ಬೆಂಗಳೂರು, ಜನವರಿ 24, ಜನವರಿ 2021 (www.justkannada.in): ಜಿಂದಾಲ್​ ಸಮೂಹ ಸಂಸ್ಥೆಯ ಬ್ರಾಂಡ್​ ಅಂಬಾಸಿಡರ್​ ಆಗಿ ಆಯ್ಕೆಯಾಗಿರುವ ರಾಹುಲ್​ ಬಳ್ಳಾರಿ ಬಳಿಯ ತೋರಣಗಲ್​ ಜಿಂದಾಲ್​ ಸ್ಟೀಲ್​ ಫ್ಯಾಕ್ಟರಿಗೆ ಭೇಟಿ ನೀಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ಆಟಗಾರ, ಕನ್ನಡಿಗ ಜಿಂದಾಲ್​ ಸಮೂಹ ಸಂಸ್ಥೆಯ ಬ್ರಾಂಡ್​ ಅಂಬಾಸಿಡರ್​. ಇದರ ಜಾಹೀರಾತು ಶೂಟಿಂಗ್ ಗಾಗಿ ರಾಹುಲ್ ಜಿಂದಾಲ್​ ಸ್ಟೀಲ್​ ಫ್ಯಾಕ್ಟರಿಗೆ ಭೇಟಿ ನೀಡಿದ್ದಾರೆ.

3 ದಿನ ರಾಹುಲ್​ ಅಲ್ಲೇ ಉಳಿದುಕೊಳ್ಳಲಿರುವ ಅವರು, ಜಾಹೀರಾತು ಶೂಟಿಂಗ್ ಮುಂದುವರಿಸಲಿದ್ದಾರೆ. ಇಬ್ಬರು ತಾಂತ್ರಿಕ ಸಿಬ್ಬಂದಿ ಮತ್ತು ಇಬ್ಬರು ಸೆಕ್ಯೂರಿಟಿ ಗಾರ್ಡ್​ಗಳು ಅವರೊಂದಿದೆ ಉಳಿದುಕೊಳ್ಳಲಿದ್ದಾರೆ.
ಜಿಂದಾಲ್​ನಲ್ಲಿ ರಾಹುಲ್ ತಿರುಗಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.