ಲಾರಿಗಳಲ್ಲಿ ಬ್ಯಾಟರಿ ಕದಿಯುತ್ತಿದ್ದ ಚಾಲಾಕಿ ಕಳ್ಳ ಪೊಲೀಸರ ಬಲೆಗೆ ಬಿದ್ದ !

ಮಂಗಳೂರು,ಜನವರಿ,24,2021(www.justkannada.in): ಪಾರ್ಕ್ ಮಾಡಿದ 5 ಲಾರಿಗಳಲ್ಲಿ ಬ್ಯಾಟರಿಗಳ ಕಳ್ಳತನ ಮಾಡಿದ ಆರೋಪಿ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ಪಣಂಬೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.jkಶ್ರೀ ಗಣೇಶ್ ಶಿಪ್ಪಿಂಗ್ ಏಜೆನ್ಸಿಯಲ್ಲಿ ಲಾಜೆಸ್ಟಿಕ್ ಕಂಪೆನಿಯಲ್ಲಿರುವ ಲಾರಿಗಳನ್ನು ಪಣಂಬೂರು ಎನ್.ಎಂ.ಪಿ.ಟಿ.ಟಿಂಬರ್ ಯಾರ್ಡ್ ನಲ್ಲಿ ಪಾರ್ಕ್ ಮಾಡುತ್ತಿದ್ದು, ಹೀಗೆ ಪಾರ್ಕ್ ಮಾಡಿದ 5 ಲಾರಿಗಳಲ್ಲಿದ್ದ ಬ್ಯಾಟರಿಗಳನ್ನು ಜನವರಿ 9ರಂದು ರಾತ್ರಿ ಕಳ್ಳತನ ಮಾಡಿರುವುದಾಗಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಜನವರಿ 21ರಂದು ಈ ಪ್ರಕರಣದಲ್ಲಿ ಒಳಗೊಂಡಿರುವ ಮಂಗಳೂರು ಬಜಾಲ್ ಪಡ್ಪು ಜುಮ್ಮಾ ಮಸೀದಿ ಹತ್ತಿರದ ನಿವಾಸಿ ಆರೋಪಿ ಎ.ಎಂ.ಇರ್ಫಾನ್ ಅಲಿಯಾಸ್ ಇರ್ಫಾನ್(25) ಅನ್ನು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಸ್ಕೂಟರ್ ಹಾಗೂ ಸ್ಕೂಟರ್ ನ ಸೀಟಿನ ಅಡಿಯಲ್ಲಿಟ್ಟಿದ್ದ 85 ಸಾವಿರ ರೂ. ಮೊತ್ತದ ಬ್ಯಾಟರಿಗಳನ್ನು ಕದಿಯಲು ಇಟ್ಟಿದ್ದ ಸ್ಪ್ಯಾನರ್ ಸೆಟ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.Theft,batteries,trucks,arrestಕಾರ್ಯಚರಣೆಯಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಅಝ್ಮತ್ ಅಲಿ, ಪಣಂಬೂರು ಪೊಲೀಸ್ ಉಪ ನಿರೀಕ್ಷಕರುಗಳಾದ ಎಂ.ಎನ್.ಉಮೇಶ್ ಕುಮಾರ್, ಕುಮಾರೇಶನ್, ಸಿಬ್ಬಂದಿ ಎ.ಎಸ್.ಐ.ಕೃಷ್ಣ, ಬಿ.ಕೆ.ಎಚ್.ಸಿಗಳಾದ ಡೇವಿಡ್ ಡಿ ಸೋಜಾ, ಚಂದ್ರಹಾಸ ಆಳ್ವ, ಶೈಲೇಂದ್ರ, ಸತೀಶ್, ರಾಮ್ ಪ್ರಭು ಪಿಸಿಗಳಾದ ದಾದಾಸಾಬ್, ವೆಂಕಟೇಶ್ ಭಾಗವಹಿಸಿದ್ದರು.

key words : Theft-batteries-trucks-arrest