” ಹೀ ಇಸ್ ಎ ಬ್ಲೂ ಫಿಲ್ಮ್ ಹೀರೋ”  ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದು ಯಾರಿಗೆ ಗೊತ್ತ..?

Promotion

ಮೈಸೂರು, ಆಗಸ್ಟ, 30, 2020(www.justkannada.in) : ಪ್ರಾತಾಪ್ ಸಿಂಹ ಒಬ್ಬ ಬ್ಲೂ ಫಿಲ್ಮ್ ಹೀರೋ. ನಿನ್ನ ಹಗರಣಗಳನ್ನ ನಾನು ದಾಖಲೆ ಸಮೇತ ಸಾಭೀತುಪಡಿಸುತ್ತೇನೆ. ನನ್ನ ಮೇಲಿನ ಆರೋಪವನ್ನ ಪ್ರತಾಪ್ ಸಿಂಹ ಸಾಬೀತುಪಡಿಸಲಿ ಎಂದು ಓಪನ್ ಚಾಲೆಂಜ್ ಹಾಕಿದರು.

jk-logo-justkannada-logo

ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬ್ಲಾಕ್ ಮೇಲ್  ಗಿರಾಕಿ ಎಂಬ ಸಂಸದ ಪ್ರತಾಪ್ ಸಿಂಹ  ಹೇಳಿಕೆ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್ ತೀವ್ರ ವಾಗ್ದಾಳಿ ನಡೆಸಿದರು.

ದಾಖಲೆ ಸಾಬೀತುಪಡಿಸಿದರೆ ಸಾರ್ವಜನಿಕವಾಗಿ ಹ್ಯಾಂಗ್

ನಾನು ಬ್ಲಾಕ್ ಮೇಲ್ ಮಾಡಿದ್ದರೆ ದಾಖಲೆಯೊಂದಿಗೆ ಚರ್ಚೆಗೆ ಬರಲಿ. ಸಾಬೀತಾದರೆ ಸಾರ್ವಜನಿಕವಾಗಿ ನಾನು ಹ್ಯಾಂಗ್ ಮಾಡಿಕೊಳ್ಳುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸಂಸದ ಪ್ರತಾಪ್ ಸಿಂಹ ಅವರಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ನಾವಿಬ್ಬರೂ ಡಿಬೇಟ್ ಮಾಡೋಣ. ನಿಮ್ಮ ಮೇಲಿನ ಆರೋಪಕ್ಕೆ ನಾನು ಸಾಕ್ಷಿ ಕೊಡುತ್ತೇನೆ. ನಿಮ್ಮ ವಿರುದ್ದ ಡಿಬೇಟ್ ನಲ್ಲಿ‌ ಸಾಕ್ಷಿ ಕೊಡಲಿಲ್ಲ ಅಂದರೆ ಕಲಾಮಂದಿರದ ಹೊರಗೆ ನೇಣು ಹಾಕಿಕೊಳ್ಳುತ್ತೇನೆ. ನಾನೇದರೂ ಯಾರತ್ರ ಆದ್ರೂ ದುಡ್ಡು ತಿಂದದ್ದರೆ ಪ್ರತಾಪ್ ಸಿಂಹ ಸಾಬೀತು ಮಾಡಲಿ ಎಂದು ಆಕ್ರೋಶವ್ಯಕ್ತಪಡಿಸಿದರು.

ಪ್ರತಾಪ್ ಸಿಂಹ ಸಂಬಂಧಿಸಿದ ನಾಲ್ಕು ವಿಡಿಯೋಗಳಿದೆ

ನನ್ನತ್ರ ಪ್ರತಾಪ್ ಸಿಂಹಗೆ ಸಂಬಂಧ ಪಟ್ಟ ನಾಲ್ಕು ವಿಡಿಯೋ ಇದೆ. ಸರ್ಕಾರ ರಚನೆ ಆಗಿರೋದು 105 ಜನ ಶಾಸಕರಿಂದ ಅಂತೀರಿ. ನಾಚಿಕೆ ಆಗಲ್ವಾ ನಿಮಗೆ. ಎಲ್ಲರ ಮೇಲೆ ಮುಗಿಬೀಳ್ತೀಯಾ. ಸಂಗೊಳ್ಳಿ ರಾಯಣ್ಣನನ್ನ ಕೇವಲ ಬೆಳಗಾವಿಗೆ ಸೀಮಿತ ಮಾಡ್ತೀರಿ ಎಂದು ಸಿಂಹ ವಿರುದ್ಧ ಕಿಡಿಕಾರಿದರು.

ಪ್ರತಾಪ್ ಸಿಂಹ ನಿನೋಬ್ಬನೆ ದೇಶದಲ್ಲಿ ಬುದ್ದಿವಂತಾನಾ?

ಪ್ರತಾಪ್ ಸಿಂಹ ನೀನು ಎಷ್ಟು ಹೆಣ್ಣುಮಕ್ಕಳನ್ನ ಹಾಳು ಮಾಡಿದ್ದಿಯಾ ಅಂತ ಗೊತ್ತಿದೆ. ಅದಕ್ಕೆ ಸಾಕ್ಷಿ ಇದೆ.  ಕೋರ್ಟ್ ಅನುಮತಿ ಪಡೆದು ಪ್ರೊಜಕ್ಟರ್ ಅಲ್ಲೆ ಬಿಡುಗಡೆ ಮಾಡ್ತಿನಿ.  ಅವರು 10% ಗೆ ಎಂಪಿ ಅನುದಾನ ಮಾರಿಕೊಂಡಿದ್ದಾರೆ. ಇದಕ್ಕು ದಾಖಲೆಗಳು ಇದೆ.  ಪತ್ರಕರ್ತರಾಗಿದ್ದಾಗ ಏನೇನ್ ಮಾಡಿದ್ದಿಯಾ ಅನ್ನೋದು ಗೊತ್ತು. ಎಲ್ಲದಕ್ಕು ದಾಖಲೆ ಇದೆ ಎಂದು ಹೇಳಿದರು.

ಗಟ್ಸ್ ಇದ್ದಾರೆ ನನ್ನ ಮೇಲೆ ಕೇಸ್ ಹಾಕಲಿ

ಪ್ರತಾಪ್ ಸಿಂಹಗೆ ಗಟ್ಸ್ ಇದ್ದಾರೆ ನನ್ನ ಮೇಲೆ ಕೇಸ್ ಹಾಕಲಿ. ಮಾನನಷ್ಟ ಮೊಕದ್ದಮೆ ಹಾಕಲಿ. ನಾನು ದಾಖಲೆಗಳನ್ನ ಕೋರ್ಟ್‍ಗೆ ನೀಡುತ್ತೇನೆ ಎಂದು ಪ್ರತಾಪ್ ಸಿಂಹ ವಿರುದ್ದ ವಾಗ್ದಾಳಿ ನಡೆಸಿದರು.

key words : Who-knows-when-Congress-spokesman-M.Laxman-“He is a blue film hero”?