ಬಿ.ವೈ.ವಿಜಯೇಂದ್ರ 482 ಕೆಪಿಎಸ್‌ಸಿ ಹುದ್ದೆ ಮಾರಾಟ ಮಾಡಿದ್ದಾರೆ : ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪ

ಮೈಸೂರು,ಆಗಸ್ಟ್,29,2020(www.justkannada.in) : ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 482 ಕೆಪಿಎಸ್‌ಸಿ ಹುದ್ದೆ ಮಾರಾಟ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

B.Y.Vijayendra-sold-482-KPSC-post-KPCC-spokesperson-M Laxman

ಡಿಸೆಂಬರ್‌ನಲ್ಲಿ ಆಗಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿ 218 ಕೋಟಿ ಅವ್ಯವಹಾರ ಆಗಿದೆ. ಹಣವನ್ನು ಕೊಟ್ಟು ತೆಗೆದುಕೊಂಡಿರುವ ದಾಖಲೆಗಳು ನಮ್ಮ ಬಳಿ ಇವೆ. ನಾನು ಮಾಧ್ಯಮಗೋಷ್ಠಿ ಮಾಡಿದ ನಂತರ ಆ ದಾಖಲೆ ನನಗೆ ಸಿಕ್ಕಿದ್ದು, ಇದನ್ನು ಸೇರಿ ಎಲ್ಲಾ ದಾಖಲೆಗಳನ್ನು ಬಿಡುಗಡೆ ಮಾಡಲು ನಾನು ಬದ್ದನಾಗಿದ್ದೇನೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

key words : B.Y.Vijayendra-sold-482-KPSC-post-KPCC-spokesperson-M Laxman