ಅನಗತ್ಯ ಕಿರಿಕಿರಿಗೆ ಮುಕ್ತಿ ನೀಡಿದ whats App ಹೊಸ ಅಪ್ಡೇಡ್ಸ್!

kannada t-shirts

ಬೆಂಗಳೂರು, ಜೂನ್ 29, 2019 (www.justkannada.in): ವಾಟ್ಸ್‌ಆಪ್ ಬಳಕೆದಾರರಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿಸಲು ಕೆಲ ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡಿದೆ.

ಅವುಗಳ ಮಾಹಿತಿ ಇಲ್ಲಿದೆ….

ಗ್ರೂಪ್‌ ಇನ್ವಿಟೇಷನ್ ಕಿರಿಕಿರಿ
ಅನಗತ್ಯ ಕಿರಿಕಿರಿ ನೀಡುವ ಗ್ರೂಪ್‌ಗಳಿಂದ ನೀವು ಹೊರಬಂದರೆ, ಮತ್ತೆ ತಕ್ಷಣವೇ ನಿಮ್ಮನ್ನು ಆಡ್‌ ಮಾಡುತ್ತಾರೆ. ಆದರೆ, ಇನ್ಮುಂದೆ Settings-Account-Privacy-Group ಫೀಚರ್‌ನಿಂದ ಯಾವ ಗ್ರೂಪ್‌ಗೆ ಸೇರಬೇಕು ಎನ್ನುವ ನಿರ್ಧಾರವನ್ನು ನೀವೇ ತೆಗೆದುಕೊಳ್ಳಬಹುದು.

ಪ್ರೊಫೈಲ್‌ ಪಿಕ್ಚರ್ ಸೇವ್

ಯಾವುದೇ ವಾಟ್ಸ್‌ಆಪ್‌ ಪ್ರೊಫೈಲ್‌ ಪಿಕ್ಚರ್ ಅನ್ನು ಕಾಪಿ ಮಾಡುವ ಅಥವಾ ಮೊಬೈಲ್ ಗ್ಯಾಲರಿಯಲ್ಲಿ ಸೇವ್ ಮಾಡಿಕೊಳ್ಳುವ ಮತ್ತು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವ ಆಯ್ಕೆ ಸದ್ಯಕ್ಕಿದೆ. ಆದರೆ, ಇತ್ತೀಚಿನ ಆಂಡ್ರಾಯ್ಡ್ ಬೇಟಾ ಅಪ್‌ಡೇಟ್‌ನಲ್ಲಿ ಈ ಆಯ್ಕೆಯನ್ನು ಕೈಬಿಡಲಾಗಿದೆ. ಆದರೆ, ಗ್ರೂಪ್‌ನಲ್ಲಿ ಮಾತ್ರ ಈ ಆಯ್ಕೆ ಲಭ್ಯವಿರಲಿದೆ.

ಫಾರ್ವರ್ಡಿಂಗ್ ಮಾಹಿತಿ!

ವಾಟ್ಸ್‌ಆಪ್‌ನಲ್ಲಿ Forwarding Info’ and ‘Frequently Forwarded’ ಎನ್ನುವ ಎರಡು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಲಾಗಿದೆ. ಈ ಫೀಚರ್ ಸಹಾಯದಿಂದ ಒಂದು ವಾಟ್ಸ್‌ಆಪ್ ಮೆಸೆಜ್, ಫೊಟೊ ಅಥವಾ ವಿಡಿಯೋ ಎಷ್ಟು ಬಾರಿ ಫಾರ್ವರ್ಡ್‌ ಮಾಡಲಾಗಿದೆ ಎನ್ನವ ಮಾಹಿತಿಯನ್ನು ನೀಡುತ್ತದೆ. ಒಂದು ವೇಳೆ ಆ ವಿಷಯವು ಪದೇ ಪದೇ ಫಾರ್ವರ್ಡ್‌ ಆಗುತ್ತಿದ್ದರೆ ಅದಕ್ಕೆ Frequently Forwarded ಎಂದು ಸಂದೇಶದವು ಸಂದೇಶದ ಮೇಲ್ಭಾಗದಲ್ಲಿ ಕಾಣುತ್ತದೆ.

ಸ್ವಯಂಚಾಲಿತ ವಾಯ್ಸ್‌ ಮೆಸೇಜ್

ಇತರರು ವಾಟ್ಸ್‌ಆಪ್ ಮೂಲಕ ಕಳುಹಿಸುವ ವಾಯ್ಸ್‌ ಮೆಸೇಜ್ ಒಂದಕ್ಕಿಂತ ಹೆಚ್ಚಿದ್ದರೆ, ಆಗ ಒಂದು ಮೆಸೇಜ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಪ್ಲೇ ಆಗುವಂತಹ ಫೀಚರ್ ಬೀಟಾದಲ್ಲಿ ಬಂದಿದೆ. ಈ ಆಯ್ಕೆಯು ಇದುವರೆಗೆ ಆಪಲ್‌ ಫೋನ್‌ಗಳಲ್ಲಿ ಮಾತ್ರವೇ ಲಭ್ಯವಿತ್ತು. ಆದರೆ, ಸ್ವಯಂಚಾಲಿತವಾಗಿ ಒಂದರ ನಂತರ ಒಂದು ವಾಯ್ಸ್ ಮೆಸೆಜ್‌ಗಳನ್ನು ಕೇಳಬಹುದಾದ ಆಯ್ಕೆಯನ್ನು ಇದೀಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಕೂಡ ಪಡೆದುಕೊಂಡಿವೆ.

ಗ್ರೂಪ್‌ ಕಾಲ್‌ ಆಯ್ಕೆ

ಇದೀಗ ವಾಟ್ಸ್‌ಆಪ್ ಗ್ರೂಪ್‌ ಚಾಟ್‌ನಲ್ಲಿ ಹೊಸ ‘Group Call’ ಬಟನ್ ಅನ್ನು ನೀಡಲಾಗಿದೆ. ನೀವು ಯಾವುದೇ ಒಂದು ನಿರ್ದಿಷ್ಟ ಗ್ರೂಪ್‌ ಮೇಲೆ ಕ್ಲಿಕ್‌ ಮಾಡಿದರೆ ಮೇಲ್ಭಾಗದಲ್ಲಿ ಅಲ್ಲಿ ಡಯಲ್ ಮಾಡಬಹುದಾದ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಆ ಗ್ರೂಪ್‌ನಲ್ಲಿ ಇರುವ ನಂಬರ್‌ಗಳ ಪಟ್ಟಿ ತೆರೆದುಕೊಳ್ಳುತ್ತದೆ. ಅದರಲ್ಲಿ ಯಾರಿಗೆ ಕಾಲ್‌ ಮಾಡಬೇಕು ಎಂಬದುನ್ನು ಆಯ್ಕೆ ಮಾಡಬೇಕು. ಆದರೆ, ಸೇವ್ ಆಗಿರುವ ನಂಬರ್‌ಗಳು ಮಾತ್ರವೇ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ.

website developers in mysore