ಐಸಿಸಿ ಟೆಸ್ಟ್ ಚಾಂಪಿಯನ್’ಶಿಪ್ ಡ್ರಾ, ಟೈ, ವಾಶ್ ಔಟ್ ಆದ್ರೆ ಮುಂದೇನು…?!

ಬೆಂಗಳೂರು, ಮೇ 20, 2021 (www.justkannada.in): 

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಫೈನಲ್‌ ಪಂದ್ಯದ ಸಂಬಂಧ ಐಸಿಸಿ ಹೊಸ ನೀತಿಯೊಂದನ್ನು ಪ್ರಕಟಿಸಬೇಕಿದೆ.

ಫೈನಲ್‌ ಪಂದ್ಯ ಡ್ರಾ ಅಥವಾ ಟೈ ಆಗಿ ಅಂತ್ಯ ಕಂಡರೆ, ಇದಕ್ಕೂ ಮಿಗಿಲಾಗಿ ವಾಶೌಟ್‌ ಆದರೆ ಆಗ ಚಾಂಪಿಯನ್‌ ಆಗುವವರು ಯಾರು? ಎಂಬ ಪ್ರಶ್ನೆಗೆ ಐಸಿಸಿ ಉತ್ತರ ಕಂಡುಹಿಡಿಯಬೇಕಿದೆ.

ಐಸಿಸಿ ವಿಶ್ವ ಟೆಸ್ಟ್‌ ಫೈನಲ್‌ ಪಂದ್ಯ ಡ್ರಾ ಆದರೆ? ಶೀಘ್ರವೇ ಐಸಿಸಿಯಿಂದ ನಿಯಮಾವಳಿ ಬಿಡುಗಡೆಯಾಗಬೇಕಿದೆ.

ಫೈನಲ್ಸ್ ಪಂದ್ಯದ ಕುರಿತ ಕೆಲವು ಸಾಧ್ಯತೆಗಳು ಇಂತಿವೆ…
1. ಎರಡೂ ತಂಡಗಳನ್ನು ಜಂಟಿ ವಿಜೇತರೆಂದು ಘೋಷಿಸುವುದು.
2. ಮೀಸಲು ದಿನವನ್ನು ನೀಡಿ ಸ್ಪಷ್ಟ ಫ‌ಲಿತಾಂಶ ಬರುವ ತನಕ ಕಾಯುವುದು.
3. ಐದು ದಿನಗಳ ಮಿತಿಯನ್ನು ತೆಗೆದು ಫ‌ಲಿತಾಂಶ ಬರುವ ತನಕವೂ ಪಂದ್ಯವನ್ನು ಮುಂದುವರಿಸುವುದು (ಟೈಮ್‌ ಲೆಸ್‌ ಟೆಸ್ಟ್‌).
4. ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ತಂಡವನ್ನು ಚಾಂಪಿಯನ್‌ ಎಂದು ತೀರ್ಮಾನಿಸುವುದು.
5. “ಲೀಗ್‌’ ಹಂತದಲ್ಲಿ ಅತ್ಯಧಿಕ ಅಂಕ ಹೊಂದಿದ್ದ ತಂಡವೇ ಚಾಂಪಿಯನ್‌ ಎಂಬ ತೀರ್ಮಾನಕ್ಕೆ ಬರುವುದು.
6. ಪ್ರತೀ ಹಂತದದಲ್ಲಿ (ಪ್ರತೀ 100 ರನ್ನಿಗೆ, ಪ್ರತೀ 5 ವಿಕೆಟಿಗೆ) ಅಂಕಗಳನ್ನು ನೀಡಿ, ಅತ್ಯಧಿಕ ಅಂಕ ಗಳಿಸಿದ ತಂಡಕ್ಕೆ ಟ್ರೋಫಿ ನೀಡುವುದು.