ರಂಗಾಯಣದ ವಾರಾಂತ್ಯ ರಂಗಪ್ರದರ್ಶನ – ‘ದಹನ’

Promotion

ಮೈಸೂರು,ನವೆಂಬರ್,18,2020(www.justkannada.in) : ರಂಗಾಯಣ ವಾರಾಂತ್ಯ ರಂಗಪ್ರದರ್ಶನದ ಅಂಗವಾಗಿ ನವೆಂಬರ್ 22ರಂದು ಸಂಜೆ 6.30ಕ್ಕೆ ಭಾನುವಾರ ರಂಗಾಯಣದ ಭೂಮಿಗೀತ ರಂಗಮಂದಿರದಲ್ಲಿ ಬೆಂಗಳೂರಿನ ರಂಗ ಅಂತರಂಗ ತಂಡದಿಂದ, ರಾಘವೇಂದ್ರ ನಾಯಕ್ ಅವರು ರಂಗರೂಪ ಮತ್ತು ನಿರ್ದೇಶನ ಮಾಡಿರುವ ‘ದಹನ’ ನಾಟಕದ ಮೊದಲ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

kannada-journalist-media-fourth-estate-under-loss

ದಹನ ನಾಟಕದ ಸಾರಾಂಶ

ನಟನೆ, ನಿರ್ದೇಶನ, ಸಾಹಿತ್ಯ ಹೀಗೆ ಬಹುಮುಖ ಪ್ರತಿಭೆ ಇರುವ ಸ್ವಘೋಷಿತ ಬುದ್ಧಿ ಜೀವಿಗಳಲ್ಲಿ ಒಬ್ಬನಾದ ಎಚ್.ಬಿ.ಆರ್.ಎನ್ನುವ ಸಾಹಿತಿಯ ಕತೆ ದಹನ, ಹೆಣ್ಣಿನ ಮನಸ್ಸಿನೊಳಗೆ ಇಳಿದು ಆಕೆಯ ಅಂತರಾಳದ ನೊವು, ಕಷ್ಟಗಳ ಬಗ್ಗೆ ಬಲು ಆಪ್ತವಾಗಿ ಬರೆಯುವ ಈತನಿಗೆ, ಅಕ್ಷತ ಎನ್ನುವ ಅಭಿಮಾನಿಯೊಬ್ಬಳು, ತನ್ನ ಸಮಸ್ಯೆ ಹೇಳಿಕೊಳ್ಳಬೇಕು, ಮನೆಗೆ ಬರುವಿರಾ? ಎಂದು ಬರುವ ಪೋನ್ ಕರೆಯಿಂದ ಸಭ್ಯವಾಗಿರುವ ಎಚ್.ಬಿ.ಆರ್.ನ ಬಳಿ ತನ್ನ ಸಾಂಸಾರಿಕ ಜೀವನದ ಸಮಸ್ಯೆಗಳನ್ನು ಅವಲೋಕನ ಮಾಡಿಕೊಳ್ಳುತ್ತಾ, ತನ್ನನ್ನು ತಾನು ಕಂಡುಕೊಳ್ಳಲು ಪ್ರಯತ್ನಿಸುವ ಅಕ್ಷತ ಒಂದು ಕಡೆ.

ಹೊರ ಜಗತ್ತಿಗೆ ಸ್ತ್ರೀ ಸಂವೇದನಾ ಬರಹಗಳಿಂದಲೇ ಬಲು ಪ್ರಸಿದ್ಧನಾದರೂ, ಅಂತರಾತ್ಮದಲ್ಲಿ ಗಂಡು ಎಂಬ ಅಹಂಕಾರ, ಅವಕಾಶವಾದರೆ ಹೆಣ್ಣಿನ ಸಹಾಯಕತೆ ದುರುಪಯೋಗ ಪಡಿಸಿಕೊಳ್ಳಲು ಹವಣಿಸುವ ಎಚ್.ಬಿ.ಆರ್ ಇನ್ನೊಂದು ಕಡೆ.

ಇವರಿಬ್ಬರ ನಡುವೆ ನಡೆಯುವ ಸಂಭಾಷಣೆಗಳಲ್ಲಿ ಅಕ್ಷತ, ಎಚ್.ಬಿ.ಆರ್.ನ ಬರಹಗಳಲ್ಲಿ ಕಂಡಿದ್ದ ದೇವರನ್ನು ಆನ ನಿಜರೂಪದಲ್ಲೂ ಕಂಡುಕೊಳ್ಳಲು ಪ್ರಯತ್ನಿಸಿದರೆ, ಎಚ್.ಬಿ.ಆರ್ ದೇವರ ಪಟ್ಟ ಕಳಚಿಕೊಂಡು, ಸಾಮಾನ್ಯ ಮನುಷ್ಯನಂತೆ ಸುಖ ಪಡೆಯಲು ಪ್ರಯತ್ನಿಸುವನು.

ಬೇರೆಯವರ ಬೆತ್ತಲನ್ನು ನೋಡಿ ಸುಖಿಸಲು ಬಯಸುವ ಮನುಷ್ಯ, ಕೊನೆಗೊಂದು ದಿನ ತನ್ನ ಆತ್ಮಸಾಕ್ಷಿಯ ಮುಂದೆ ಬೆತ್ತಲಾದಾಗ ಅವನ ಅಹಂ, ಕಾಮ ದಹನವಾಗುತ್ತದೆಯೇ?, ಪ್ರಸಿದ್ಧ ನಾನು ಎಂಬ ಅಹಂನಿಂದ ಮೆರೆಯುತ್ತಿದ್ದ ಎಚ್.ಬಿ.ಆರ್.ನ ದಾಹಕ್ಕೆ ಅಕ್ಷತ ಬಲಿಯಾಗುವಳೋ ಅಥವಾ ಪ್ರಪಂಚಕ್ಕೆ ಪ್ರಸಿದ್ಧರ ಅವಶ್ಯಕತೆ ಇಲ್ಲ! ಎಂಬ ಅರಿವನ್ನು ಅಕ್ಷತ ಮೂಡಿಸುವಲ್ಲಿ ಸಫಲಳಾಗುವಳೋ ಎಂಬುದನ್ನು ನಾಟಕದಲ್ಲಿ ನೋಡಬೇಕಿದೆ.

weekend,theater,Performance,ignition

ಬೆಂಗಳೂರಿನಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿಯಿಂದ ದುಡಿಯುವ ಕ್ರಿಯಾಶೀಲ ತಂಡ ರಂಗ ಅಂತರಂಗ. ಈ ತಂಡದ ಮೊದಲ ಪ್ರಯತ್ನವೇ ನಾಟಕ ದಹನ ರಂಗಭೂಮಿ ಕಿರುತೆರೆಗಳಲ್ಲಿ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿರುವ ರಾಘವೇಂದ್ರ ನಾಯಕ್ ಈ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆತ್ಮೀಯ ರಂಗಭೂಮಿಯ ಕಲ್ಪನೆಯಲ್ಲಿ ಮೂಡಿರುವ ಈ ನಾಟಕ ಹತ್ತಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

key words ; weekend-theater-Performance-ignition