ಡಿಕೆಶಿ-ಸಿದ್ಧರಾಮಯ್ಯ ನಡುವೆ ಹಗ್ಗಜಗ್ಗಾಟ: ಬಿಜೆಪಿ ಭಯಪಡುವ ಅಗತ್ಯವಿಲ್ಲ- ಬಿವೈ ವಿಜಯೇಂದ್ರ.

Promotion

ಶಿವಮೊಗ್ಗ,ಆಗಸ್ಟ್,8,2022(www.justkannada.in): ಮೇಕೆದಾಟು ಹೋರಾಟದಲ್ಲಿ ಡಿಕೆ ಶಿವಕುಮಾರ್, ಸಿದ್ಧರಾಮೋತ್ಸವದಲ್ಲಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ  ಕಾಂಗ್ರೆಸ್ ನಲ್ಲಿ ಹಗ್ಗಜಗ್ಗಾಟ ಆರಂಭವಾಗಿದ್ದು, ಹೀಗಾಗಿ ಬಿಜೆಪಿ ಭಯಪಡುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಕಾಂಗ್ರೆಸ್ ನಲ್ಲಿ‌ ನ್ಯೂಟನ್ ನ ಮೂರನೇ ನಿಯಮ ಅಳವಡಿಕೆಯಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಕ್ರಿಯೆಗೆ ಪ್ರತಿಕ್ರಿಯೆ ಆಗುತ್ತಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೇಕೆದಾಟು ಪಾದಯಾತ್ರೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸಿದ್ದರಾಮಯ್ಯ ಇದೀಗ ಸಿದ್ದರಾಮೋತ್ಸವ ನಡೆಸಿ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ‌ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇಬ್ಬರ ನಡುವೆ ಹಗ್ಗಜಗ್ಗಾಟ ಪ್ರಾರಂಭವಾಗಿದೆ ಎಂದರು.

ನಾನು ಶಾಸಕನಾಗಲು ಪಕ್ಷದ ಸಂಘಟನೆ ಮಾಡುತ್ತಿಲ್ಲ. ಪಕ್ಷದ ಜವಾಬ್ದಾರಿಯನ್ನು ಸಂತೃಪ್ತಿಯಿಂದ ಮಾಡುತಿದ್ದೇನೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರೇ ಸ್ಪರ್ಧಿಸಬೇಕು ಇಲ್ಲದಿದ್ದಲ್ಲಿ ವಿಜಯೇಂದ್ರ ಸ್ಪರ್ಧಿಸಬೇಕು ಎಂದು ಒತ್ತಡ ಹೇರಿದ್ದರು. ಪಕ್ಷದ ಹಿರಿಯರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಬಿವೈ ವಿಜಯೇಂಧ್ರ ತಿಳಿಸಿದರು.

Key words: war –between- DK shivakumar-Siddaramaiah- BJP – BY Vijayendra.