Wednesday, October 14, 2026

Dasara Wishes

Strengthening DasraWishes_JK DasraWishes JK
Happy Dasara
Home Front Page ನನ್ನ ತಂದೆಯದ್ದು ಬಿಜೆಪಿ ಪಕ್ಷ, ಆದ್ರೆ ನನ್ನದಲ್ಲ: ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು- ಹೆಚ್.ವಿಶ್ವನಾಥ್ ಪುತ್ರ...

ನನ್ನ ತಂದೆಯದ್ದು ಬಿಜೆಪಿ ಪಕ್ಷ, ಆದ್ರೆ ನನ್ನದಲ್ಲ: ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು- ಹೆಚ್.ವಿಶ್ವನಾಥ್ ಪುತ್ರ ಪೂರ್ವಜ್ ಹೇಳಿಕೆ

ಮೈಸೂರು,ಆಗಸ್ಟ್,8,2022(www.justkannada.in): ನನ್ನ ತಂದೆಯದ್ದು ಬಿಜೆಪಿ ಪಕ್ಷ, ಆದ್ರೆ ನನ್ನದಲ್ಲ. ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂದು ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ್ ಪುತ್ರ ಪೂರ್ವಜ್ ಹೇಳಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಪೂರ್ವಜ್, ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೇನೆ.  ನಾನು ಎಂದೂ ಕಾಂಗ್ರೆಸ್ ಪಕ್ಷ ಬಿಟ್ಟಿಲ್ಲ. ನಾನು ಬಿಜೆಪಿ ಕಾರ್ಯಕ್ರಮದಲ್ಲಿ ಯಾವತ್ತೂ ಭಾಗಿಯಾಗಿಲ್ಲ. ನಾನು ತಂದೆಯವರ ಚುನಾವಣೆ ವೇಳೆ ಮಾತ್ರ ಎರಡು ಬಾರಿ ಪ್ರಚಾರ ಮಾಡಿದ್ದೆ.ನನ್ನ ತಂದೆಯದ್ದು ಬಿಜೆಪಿ ಪಕ್ಷ, ಆದ್ರೆ ನನ್ನದಲ್ಲ: ಸಿದ್ಧರಾಮಯ್ಯ ಮತ್ತೊಮ್ಮೆ...

ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು. ನನ್ನ ತಂದೆಯದ್ದು ಬಿಜೆಪಿ ಪಕ್ಷ, ಆದ್ರೆ ನನ್ನದಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದೀನಿ, ಇರ್ತೀನಿ. ನನ್ನ ತಂದೆ ಎಂದಿಗೂ ನನಗೆ ಷರತ್ತು ವಿಧಿಸಿಲ್ಲ. ನಾನು ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಹೋಗ್ತೀನಿ ಎಂದಿದ್ದಕ್ಕೆ ಹೋಗು ಎಂದಿದ್ದರು. ನಾನು ಸಿದ್ದರಾಮಯ್ಯನವರಿಗೆ ಕಾಲ್ ಮಾಡಿಕೊಂಡೆ ಬಂದಿರುವೆ ಎಂದು ಎಚ್.ವಿಶ್ವನಾಥ್ ಪುತ್ರ ಪೂರ್ವಜ್ ಹೇಳಿದ್ದಾರೆ.

Key words: congress-H.Vishwanath-son-poorvaj-siddaramaiah