ಕಾದು ನೋಡ್ತೀನಿ: ಮಂತ್ರಿ ಮಾಡಿದ್ರೆ ರಾಜ್ಯಕ್ಕೆ ಕೆಲಸ ಮಾಡ್ತೀನಿ- ಶಾಸಕ ಉಮೇಶ್ ಕತ್ತಿ…

Promotion

ಬೆಂಗಳೂರು,ಫೆ,4,2020(www.justkannada.in): ನನ್ನನ್ನ ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. ಕಾದು ನೋಢ್ತೀನಿ ಮಂತ್ರಿ ಮಾಡಿದ್ರೆ ರಾಜ್ಯಕ್ಕೆ ಕೆಲಸ ಮಾಡುತ್ತೇನೆ ಎಂದು ಹಿರಿಯ ಶಾಸಕ ಉಮೇಶ್ ಕತ್ತಿ ತಿಳಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಉಮೇಶ್ ಕತ್ತಿ, ನನಗೆ ಸಚಿವ ಸ್ಥಾನ ನೀಡುವ ವಿಶ್ವಾಸವಿದೆ. ನೀಡದಿದ್ದರೇ ಬೇಸರವೂ ಇಲ್ಲ. ನನ್ನನ್ನ ಮಂತ್ರಿ ಮಾಡುವುದಾಗಿ ಹೇಳಿದ್ದಾರೆ. ಕಾದು ನೋಢ್ತೀನಿ ಮಂತ್ರಿ ಮಾಡಿದ್ರೆ ರಾಜ್ಯಕ್ಕೆ ಕೆಲಸ ಮಾಡುತ್ತೇನೆ. ಮಾಡದಿದ್ದರೇ ನನ್ನ ಕ್ಷೇತ್ರಕ್ಕೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಸೋತವರಿಗೂ ಸಚಿವ ಸ್ಥಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಉಮೇಶ್ ಕತ್ತಿ,  ಸ್ಪೆಷೆಲ್ ಕೇಸ್ ಇದ್ರೆ ಕೊಡಬಹುದು. ಆದ್ರೆ ಸ್ಪೆಷಲ್ ಕೇಸ್ ಯಾರೂ ಇಲ್ಲ. ಹೀಗಾಗಿ ಅವಶ್ಯಕತೆ ಇಲ್ಲ ಎಂದರು.  ಸಂಪುಟ ವಿಸ್ತರಣೆ ವೇಳೆ ಕೆಲವರಿಗೆ ಅಸಮಾಧಾನ ಇರಬಹುದು. ಎಲ್ಲಾ ಸರ್ಕಾರದಲ್ಲೂ ಬಂಡಾಯ ಟೀಂ ಇರುತ್ತೆ ಎಂದರು.

Key words: Waiting-  Minister –position-mla umesh katti.