ಆ ಮಹಾನ್ ನಾಯಕ ಯಾರೆಂದು ತಿಳಿಯಲು ಕುತೂಹಲದಿಂದ ಕಾಯುತ್ತಿದ್ದೇನೆ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ…

Promotion

ಬೆಂಗಳೂರು,ಮಾರ್ಚ್,15,2021(www.justkannada.in): ಸಿಡಿ ಪ್ರಕರಣದ ಹಿಂದೆ ಇರುವ ಆ ಮಹಾನ್ ನಾಯಕ ಯಾರೆಂದು ತಿಳಿಯಲು ನಾನು ಕುತೂಹಲದಿಂದ ಕಾಯುತ್ತಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

ರಾಮನಗರದಲ್ಲಿ ಇಂದು ಈ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿಡಿ ಪ್ರಕರಣ ಈಗ ಸಾರ್ವಜನಿಕರಿಗೆ ನಗೆಪಾಟಲಿಗೆ ಪರಿವರ್ತನೆಯಾಗುತ್ತಿದೆ. ಯಾವುದೋ ಲಿಂಕ್ ತೆಗೆದುಕೊಂಡು ಧಾರವಾಹಿ ರೀತಿ ಇದೆ. ಅಂತಿಮವಾಗಿ ಅದು ಯಾರಿಗೆ ಸುತ್ತಾಕಿಕೊಳ್ಳಲಿದೆ ಎಂದು ನೋಡಲು ಕಾಯುತ್ತಿದ್ದೇನೆ  ಎಂದರು.

ಇನ್ನು ಡಿ.ಕೆ. ಶಿವಕುಮಾರ್ ಅವರು ಸಿಡಿ ಪ್ರಕರಣದಲ್ಲಿ ಯಾಕೆ ಅವರ ಹೆಸರು ತಂದುಕೊಂಡರು ಗೊತ್ತಿಲ್ಲ. ಯಾರಾದರೂ ಹೇಳಿದ್ದಾರಾ ಅವರೇ ಮಾಡಿದ್ದಾರೆ ಎಂದು? ಯಾಕೇ ಅವರೇ ಊಹೇ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಎಂದರು.waiting -great hero –cd –case-Former CM -HD Kumaraswamy

ಇಂತಹ ವೈಯಕ್ತಿಕ ವಿಚಾರಗಳ ಬಗ್ಗೆ ತಲೆ ಹಾಕಲ್ಲ. ರಾಜ್ಯದಲ್ಲಿ ಇದಕ್ಕಿಂತ ಜನರ ಸಮಸ್ಯೆಗಳೇ ಹೆಚ್ಚಿವೆ.  ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.

 

Key words: waiting -great hero –cd –case-Former CM -HD Kumaraswamy.