ನಾಲ್ಕೇ ದಿನಕ್ಕೆ 50 ಕೋಟಿ ಕ್ಲಬ್ ಸೇರಿದ ರಾಬರ್ಟ್ !

ಬೆಂಗಳೂರು, ಮಾರ್ಚ್ 15, 2021 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮತ್ತೆ ಬಾಕ್ಸ್ ಆಫೀಸ್ ರೆಕಾರ್ಡ್ ಗಳನ್ನು ಮುರಿದಿದೆ.

ನಾಲ್ಕನೇ ದಿನಕ್ಕೆ ರಾಬರ್ಟ್ 59.8 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಿನ್ನೆ ವಾರಾಂತ್ಯವಾದ್ದರಿಂದ ಥಿಯೇಟರ್ ಗಳಲ್ಲಿಯೂ ಜನಜಂಗುಳಿ ಜಾಸ್ತಿ ಇತ್ತು.

ಈ ದಿನದ ಕಲೆಕ್ಷನ್ 15 ಕೋಟಿ ರೂ ದಾಟಿದೆ. ಇದರೊಂದಿಗೆ ನಾಲ್ಕೇ ದಿನಕ್ಕೆ 50 ಕೋಟಿ ಕ್ಲಬ್ ಸೇರಿದೆ.

ಬಿಕೆಟಿ ಮತ್ತು ಸೌತ್ ಕೆನರಾದಲ್ಲಿ 20 ಕೋಟಿ, ಎಂಎಂಸಿಎಚ್ 12 ಕೋಟಿ, ದುರ್ಗ ಮತ್ತು ದಾವಣಗೆರೆ 9 ಕೋಟಿ, ಶಿವಮೊಗ್ಗ 4.80 ಕೋಟಿ, ಹೈದರಾಬಾದ್ ಕರ್ನಾಟಕ 8 ಕೋಟಿ ರೂ., ಬಾಂಬೆ ಕರ್ನಾಟಕ 6 ಕೋಟಿ ರೂ. ಕಲೆಕ್ಷನ್ ಮಾಡಿದೆ.