ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸಚಿವ ಆರ್.ವಿ ದೇಶಪಾಂಡೆ…

kannada t-shirts

ಮೈಸೂರು,ಜೂ,20,2019(www.justkannada.in): ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಸಚಿವ ಆರ್.ವಿ ದೇಶಪಾಂಡೆ ಅವರಿಗೆ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ದೇವಸ್ಥಾನದ ಮುಖ್ಯ ಆಗಮಿಕರಾದ ಡಾ.ಶಶಿಶೇಖರ್ ಧೀಕ್ಷಿತ್ ನೇತೃತ್ವದಲ್ಲಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ನಂತರ ಸಚಿವ ಆರ್.ವಿ ದೇಶಪಾಂಡೆ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಿನ್ನೆ ಮೈಸೂರು- ಕೊಡಗು ಕ್ಷೇತ್ರದಲ್ಲಿ ಪ್ರಕೃತಿ ವಿಕೋಪ ಸ್ಥಳಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದ ಸಚಿವ ಆರ್.ವಿದೇಶಪಾಂಡೆ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಮೈಸೂರಿನಲ್ಲಿ ಪ್ರಕೃತಿ ವಿಕೋಪ ಸ್ಥಳಗಳಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ.

ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಸಚಿವ ಆರ್.ವಿದೇಶಪಾಂಡೆ,  ರಾಜ್ಯದಲ್ಲಿ ಕಳೆದ ೧೮ ವರ್ಷಗಳಿಂದ ಸರಿಯಾಗಿ ಮಳೆ ಯಾಗಿಲ್ಲ.೪ ವರ್ಷ ಮಾತ್ರ ಮಳೆಯಾಗಿದೆ. ಹೆಚ್ಚಿನ ಮಳೆಯಾಗಲಿ ಎಂದು ಈಶ್ವರ ಹಾಗೂ ತಾಯಿ ಚಾಮುಂಡಿಯಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಒಂದು ಕಡೆ ಬರಗಾಲ ಇದ್ರೇ ಮತ್ತೋಂದು ಕಡೆ ಅತಿವೃಷ್ಟಿ ಇದೆ‌. ಇದನ್ನು ನಿವಾರಣೆ ಮಾಡಲು ದೇವರ ಅನುಗ್ರಹ ಮುಖ್ಯ ಹಾಗಾಗಿ ದೇವರ ಪ್ರಾರ್ಥನೆಯೊಂದಿಗೆ ಇಂದಿನ ಕಾರ್ಯ ಪ್ರಾರಂಭಿಸಿದ್ಧೇನೆ ಎಂದರು.

ಕೆ ಪಿ ಸಿ ಸಿ ವಿಸರ್ಜನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಅದರು ಬಗ್ಗೆ ನಾನು ಕಾಮಂಟೇ ಮಾಡಲ್ಲ. ಕಾಂಗ್ರಸ್ ಪಕ್ಷದವರು ನನಗೆ ಮಂತ್ರಿಯಾಗಿ ಕೆಲಸ ಮಾಡು ಅಂದಿದ್ದಾರೆ. ನಾನು ಮಂತ್ರಿಯಾಗೆ ಕೆಲಸ ಮಾಡ್ತೀನಿ ಅಷ್ಟೇ. ಇದ್ದರಿಂದ ಪಕ್ಷದ ಸಂಘಟನೆಗೆ ಅನೂಕುಲವಾಗುತ್ತದೆ. ಎ ಐ ಸಿ ಸಿ ಕ್ರಮವನ್ನ ಸ್ವಾಗತಿಸುತ್ತೇನೆ. ಒಳ್ಳೆ ಉದ್ದೇಶದಿಂದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

 

Keywords: Visit -Chamundi Hill-Minister RV Deshpande -special worship.

website developers in mysore