ಬೈಕ್ ಗೆ ಟೆಂಪೋ ಡಿಕ್ಕಿ: ದಂಪತಿ ಸ್ಥಳದಲ್ಲೇ ದುರ್ಮರಣ…

ಚಾಮರಾಜನಗರ,ಜೂ,20,2019(www.justkannada.in)  ಬೈಕ್ ಗೆ ಟೆಂಪೋ ಡಿಕ್ಕಿಯಾಗಿ ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಕಾಗಲವಾಡಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಪತಿ ಮಾದೇಶ್ ಹಾಗೂ ಪತ್ನಿ ಮಣಿ ಮೃತಪಟ್ಟವರು. ಬೈಕ್ ನಲ್ಲಿದ್ದ ಮಗು ಅಪಾಯದಿಂದ ಪಾರಾಗಿದೆ. ನಂಜನಗೂಡಿಗೆ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಈ ಕುರಿತು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Tempo -collides – bike-couple- died- on the spot.