ಚೆನ್ನೈನಲ್ಲಿ ರಾಯಲ್ ಚಾಲೆಂಜರ್ಸ್ ಸೇರಿದ ಕಿಂಗ್ ಕೊಯ್ಲಿ

Promotion

ಬೆಂಗಳೂರು, ಏಪ್ರಿಲ್ 02, 2020 (www.justkannada.in): 

ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ ಕೊಯ್ಲಿ ಕೊಹ್ಲಿ ಚೆನ್ನೈ ತಲುಪಿದ್ದು, ಆರ್ ಸಿಬಿ ತಂಡ ಸೇರಿದ್ದಾರೆ.

ಈ ವಿಷಯವನ್ನು ಆರ್ ಸಿಬಿ ಟ್ವೀಟ್ಟರ್ ನಲ್ಲಿ ತಿಳಿಸಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಕೂಡ ರಾಯಲ್ ಚಾಲೆಂಜರ್ಸ್ ಟೀಂ ಸೇರಿದ್ದಾರೆ.

ಅಂದಹಾಗೆ ಚೆನ್ನೈನಲ್ಲಿ ಆರಂಭಿಕ ಪಂದ್ಯಗಳನ್ನಾಡಲಿರುವ ಆರ್ ಸಿಬಿ ತಂಡದ ಹೆಚ್ಚಿನ ಸದಸ್ಯರು ಈಗಾಗಲೇ ತಂಡವನ್ನು ಕೂಡಿಕೊಂಡಿದ್ದಾರೆ.

ಮುಂದಿನ ಏಳು ದಿನಗಳ ಕಾಲ ಹೋಟೆಲ್ ರೂಂನಲ್ಲಿ ಕಳೆಯಲಿರುವ ಕೊಹ್ಲಿ ಬಳಿಕ ಅಭ್ಯಾಸಕ್ಕೆ ಮರಳಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಬಲ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.