ರಣ್’ಬೀರ್ ಬಳಿಕ ನಟಿ ಅಲಿಯಾ ಭಟ್’ಗೂ ಕೊರೊನಾ ಸೋಂಕು

ಬೆಂಗಳೂರು, ಏಪ್ರಿಲ್ 02, 2020 (www.justkannada.in): ನಟಿ ಅಲಿಯಾ ಭಟ್ ಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಇತ್ತೀಚಿಗಷ್ಟೆ ಆಲಿಯಾ ಗೆಳೆಯ ರಣಬೀರ್’ಗೂ ಕೋವಿಡ್ ಸೋಂಕು ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಈಗ ಅಲಿಯಾಗೂ ಕೊರೊನಾ ಪಾಸಿಟಿವ್ ವರದಿ ಬಂದಿದೆ.

ಈ ವಿಷಯವನ್ನು ಸ್ವತಃ ಆಲಿಯಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮನೆಯಲ್ಲಿ ಕ್ವಾರಂಟೈನ್ ಆಗಿರುವುದಾಗಿ ಅವರು ಹೇಳಿದ್ದಾರೆ.

ವೈದ್ಯರ ಸಲಹೆ ಮೇರೆಗೆ ನಾನು ಎಲ್ಲಾ ಸುರಕ್ಷತಾ ನಿಯಮಗಳನ್ನು ಅನುಸರಿಸುತ್ತಿರುವುದಾಗಿ ಆಲಿಯಾ ಭಟ್ ತಿಳಿಸಿದ್ದಾರೆ.