ನಮ್ಮ ಮುಂದಿನ ಯಾತ್ರೆ ವಿಜಯಯಾತ್ರೆ: ಬಿಜೆಪಿ 140ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ- ಮಾಜಿ ಸಿಎಂ ಬಿಎಸ್ ವೈ.  

CM BS yeddyurappa- dead -Corona Warrior- family
Promotion

ಬೆಂಗಳೂರು,ಅಕ್ಟೋಬರ್,7,2022(www.justkannada.in): ನಮ್ಮ‌ ಮುಂದಿನ ಯಾತ್ರೆ ವಿಜಯ ಯಾತ್ರೆ. ನಮ್ಮನ್ನ ಕಟ್ಟಿ ಹಾಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿ 140ಕ್ಕೂ ಹೆಚ್ಚು ಸ್ಥಾನಗಳ್ನ ಗೆಲ್ಲುವುದು ನಿಶ್ಚಿತ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನುಡಿದರು.

ಇಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಮ್ಮ ಸರ್ಕಾರದ ಸಾಧನೆಗಳನ್ನ ಜನರ ಮನೆಗಳಿಗೆ ತಲುಪಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. CM BS yeddyurappa- dead -Corona Warrior- family

ಬಿಜೆಪಿ ಅಧಿಕಾರಕ್ಕೆ ಬರುವುದನ್ನ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪರಿಶಿಷ್ಟ ರ ಕಲ್ಯಾಣಕ್ಕೆ ನಾವು ಕೆಲಸ ಮಾಡಿದ್ದೇವೆ. ಅನೇಕ ಮನೆಗಳಿಗೆ ವಿದ್ಯುತ್ ಇರಲಿಲ್ಲ. ಆ ಮನೆಗಳಿಗೆ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ. ನಮ್ಮ‌ಕಾರ್ಯಕರ್ತರು ನಮ್ಮ ಯೋಜನೆ ಮನದಟ್ಟು ಮಾಡಿಕೊಂಡು ಮನೆ ಮನೆಗೆ ತಲುಪಿಸಬೇಕು. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಜನರಿಗೆ ತಲುಪಿದೆ. 43 ಲಕ್ಷಕ್ಕೂ ಹೆಚ್ಚು ರೈತರಿಗೆ ಡಿಬಿಟಿ ಮೂಲಕ ಹಣ ತಲುಪಿಸಿದ್ದೇವೆ. ರಾಜ್ಯದ ಪ್ರತಿ ಮನೆಗೆ ಶುದ್ದವಾದ ಕುಡಿಯೋ ನೀರು ಕೊಡುವ ಮೂಲಕ ಮಧ್ಯಮ ವರ್ಗದವರಿಗೆ ಗ್ಯಾಸ್- ಪಡಿತರ ತಲುಪಿಸುವ ಮೂಲಕ ಕೆಲಸ ಮಾಡಿದ್ದೇವೆ ಎಂದು ಹೇಳಿದರು.

Key words: Vijayayatra-BJP – win – 140 seats- Former CM –BS Yeddyurappa