ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ವಿಜಯ್ ಸೇತುಪತಿ

Promotion

ಬೆಂಗಳೂರು, 07, ನವೆಂಬರ್ 2020: ನಟ ವಿಜಯ್ ಸೇತುಪತಿ ಹೊಸ ಸಿನಿಮಾ ಮೂಲಕ ಫ್ಯಾನ್ಸ್‌ಗೆ ಗುಡ್‌ ನ್ಯೂಸ್ ನೀಡಿದ್ದಾರೆ.

ಇಂದೂ ವಿಎಸ್‌ ನಿರ್ದೇಶನ ಮಾಡಲಿರುವ ’19’ ಚಿತ್ರದಲ್ಲಿ ವಿಜಯ್ ಹೀರೋ ಆಗಿ ನಟಿಸಲಿದ್ದಾರೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ವಿಜಯ್‌ಗೆ ನಾಯಕಿಯಾಗಿ ಕರ್ನಾಟಕದ ಮೂಲದ ನಟಿ ನಿತ್ಯಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ.

ನ.5ರಿಂದ ಕೇರಳದ ತೊಡುಫುಳಾದಲ್ಲಿ ಶೂಟಿಂಗ್ ಆರಂಭವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಸಲೀಂ ಅಹಮದ್‌ ಅವರ ಜೊತೆ ಕೆಲಸ ಮಾಡಿದ ಅನುಭವ ನಿರ್ದೇಶಕಿ ಇಂದುಗೆ ಇದೆ.

ವಿಜಯ್ ಪಾತ್ರ ತುಂಬ ಕುತೂಹಲಕಾರಿಯಾಗಿದೆಯಂತೆ.ಇನ್ನು, ವಿಜಯ್ ಜೊತೆ ಕೆಲಸ ಮಾಡುವುದಕ್ಕೆ ನಿತ್ಯಾ ಖುಷಿ ವ್ಯಕ್ತಪಡಿಸಿದ್ದಾರೆ.