ಎಲ್ಲೆಡೆ ವಿಜಯ್ ಅಭಿನಯದ ‘ಬಿಗಿಲ್’ ಸಿನಿಮಾ ಹವಾ !

Promotion

ಮುಂಬೈ, ಅಕ್ಟೋಬರ್ 22, 2019 (www.justkannada.in): ವಿಜಯ್ ಅಭಿನಯದ ‘ಬಿಗಿಲ್’ ಸಿನಿಮಾ ಹವಾ ಆವರಿಸಿದೆ.

ಇದೇ ಸಿನಿಮಾದ ಹಾಡೊಂದು ಪರೀಕ್ಷೆ ಉತ್ತರ ಪತ್ರಿಕೆಯಲ್ಲಿಯೂ ಕಾಣಿಸಿಕೊಂಡಿದ್ದು, ಟ್ವಿಟರ್​ನಲ್ಲಿ ವೈರಲ್ ಆಗಿದೆ.
ಎಕಾನಾಮಿಕ್ ಡಿಮ್ಯಾಂಡ್ ವ್ಯಾಖ್ಯಾನಿಸಿ ಎನ್ನುವ ಪ್ರಶ್ನೆಗೆ ವಿದ್ಯಾರ್ಥಿಯೋರ್ವ ಬಿಗಿಲ್ ಸಿನಿಮಾದ ಹಾಡಿನ ಸಾಲನ್ನು ಬರೆದಿದ್ದಾನೆ. ಎಕನಾಮಿಕ್ ಡಿಮ್ಯಾಂಡ್ ಎಂದರೆ ಎಂದು ಆರಂಭಿಸಿ ಆ ಬಳಿಕ ಬಿಗಿಲ್ ಚಿತ್ರದ ‘ವೆರಿತನಮ್’ ಹಾಡಿನ ಸಾಹಿತ್ಯವನ್ನು ಸಂಪೂರ್ಣವಾಗಿ ಬರೆದಿದ್ದಾನೆ.
ಸದ್ಯ ವೈರಲ್ ಆಗಿರುವ ಈ ಉತ್ತರ ಪತ್ರಿಕೆ ವೆರಿತನಮ್ ಸಾಹಿತ್ಯ ರಚನೆಕಾರ ವಿವೇಕ್​ ಅವರನ್ನೂ ತಲುಪಿದೆ. ಟ್ವಿಟರ್​ನಲ್ಲಿ ಉತ್ತರ ಪತ್ರಿಕೆಯನ್ನು ಹಂಚಿಕೊಂಡಿರುವ ವಿವೇಕ್, ನಾನು ವಿದ್ಯಾರ್ಥಿಯಾಗಿದ್ದಾಗ ಸಚಿನ್​ ಇನ್ನಿಂಗ್ಸ್ ಬಗ್ಗೆ ಹೀಗೆ ಬರೆದಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.