ನೆಟ್’ಫ್ಲಿಕ್ಸ್’ನಲ್ಲಿ ರಿಲೀಸ್ ಆದ ದಳಪತಿ ವಿಜಯ್ ‘ಬೀಸ್ಟ್’

Promotion

ಬೆಂಗಳೂರು, ಮೇ 12, 2022 (www.justkannada.in): ರಿಲೀಸ್ ಆದ ತಿಂಗಳು ಕಳೆಯುವುದರೊಳಗೆ ಒಟಿಟಿಯಲ್ಲಿ ವಿಜಯ್ ನಟನೆಯ ಬೀಸ್ಟ್  ಪ್ರಸಾರ ಕಂಡಿದೆ.

‘ಬೀಸ್ಟ್​’ ಸಿನಿಮಾ ನೆಟ್​​ಫ್ಲಿಕ್ಸ್​ನಲ್ಲಿ ರಿಲೀಸ್ ಆಗಿದೆ. ಈ ಸಿನಿಮಾ ಮೆಚ್ಚುಗೆ ಗಳಿಸಿಕೊಳ್ಳದ ಹೊರತಾಗಿಯೂ ಲಾಭ ಕಂಡಿದೆ ಎಂಬುದು ವಿಶೇಷ.

ಮಾಜಿ ರಾ ಏಜೆಂಟ್​ ವೀರ ರಾಘವನ್​ (ದಳಪತಿ ವಿಜಯ್​) ಅವರು ಚೆನ್ನೈನ ಮಾಲ್ ಒಂದರಲ್ಲಿ ಸೇರಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಆ ಮಾಲ್ ಹೈಜಾಕ್ ಆಗುತ್ತದೆ ಎಂಬ ಕಥೆಯನ್ನು ಬೀಸ್ಟ್ ಹೊಂದಿದೆ.

ನೆಲ್ಸನ್ ದಿಲೀಪ್​ಕುಮಾರ್ ಅವರು ‘ಬೀಸ್ಟ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 13ರಂದು ತೆರೆಗೆ ಬಂದ ಈ ಚಿತ್ರ ‘ಕೆಜಿಎಫ್ 2’ ಎದುರು ಮಂಕಾದರೂ ಲಾಭ ಕಂಡಿದೆ.

ಭಾರತದ ಬಾಕ್ಸ್ ಆಫೀಸ್​ನಲ್ಲಿ 170 ಕೋಟಿ ರೂಪಾಯಿ ಬಾಚಿಕೊಂಡಿದೆ. ತಮಿಳುನಾಡು ಒಂದರಲ್ಲೇ ಈ ಸಿನಿಮಾ 120 ಕೋಟಿ ರೂಪಾಯಿ ಗಳಿಸಿದೆ.